ಕೊಡಗು:ರಾಜ್ಯದಲ್ಲಿ ನೂರಾರು ಅರೇಬಿಕ್ ಶಾಲೆಗಳಿವೆ. ಎಲ್ಲ ಶಾಲೆಗಳು ಶಿಕ್ಷಣ ಪಠ್ಯಕ್ರಮದ ಅನುಸಾರ ನಡೆಯಬೇಕಿತ್ತು. ಆದರೆ, ಆ ಶಾಲೆಗಳು ಸರಿಯಾದ ಶಿಕ್ಷಣ ನಡೆಯುತ್ತಿಲ್ಲ ಎಂದು ಕೊಡಗು ಉಸ್ತುವಾರಿ ಸಚಿವರಾದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಅರೇಬಿಕ್ ಶಾಲೆಗಳ ಸಮೀಕ್ಷೆ ವಿಚಾರ ಕುರಿತಾಗಿ ಮಡಿಕೇರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಅನುದಾನ ಪಡೆದ 106 ಅರೇಬಿಕ್ ಶಾಲೆಗಳಿವೆ. 80 ಖಾಸಗಿ ಅರೇಬಿಕ್ ಶಾಲೆಗಳಿವೆ. ಇವು ಶಿಕ್ಷಣ ಇಲಾಖೆಯ ಪಠ್ಯದ ಆಧಾರದಲ್ಲಿ ಬೋಧನೆ ಮಾಡುತ್ತಿಲ್ಲ. ಎಲ್ಲ ಅನುದಾನಿತ ಶಾಲೆಗಳಲ್ಲಿರುವಂತೆ ಸೌಲಭ್ಯ ಇರಬೇಕಿತ್ತು. ಮಕ್ಕಳಿಗೆ ಭಾಷಾ ಸಾಮರ್ಥ್ಯ ಕೊಡುವ ಕೆಲಸ ಮಾಡಬೇಕಿತ್ತು. ಅನೇಕ ಶಾಲೆಗಳು ಇದನ್ನು ಮಾಡಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.
27,000 ಮಕ್ಕಳಲ್ಲಿ ಪರೀಕ್ಷೆ ತೆಗೆದುಕೊಳ್ಳುವ ಮಕ್ಕಳ ಸಂಖ್ಯೆ ಕಡಿಮೆ ಇದೆ. ಆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕಾಗಿದೆ. ಮಕ್ಕಳಿಗೆ ವಿಜ್ಞಾನ ಮತ್ತಿತರ ಪಠ್ಯ ಬೋಧನೆ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ವರದಿ ಪಡೆಯಲಾಗುತ್ತಿದೆ. ಕೆಲವು ಭಾಗದಲ್ಲಿ ಶಿಕ್ಷಕರ ಕೊರತೆಯಿದೆ. ಇತ್ತೀಚಿನ ವರ್ಷಗಳಲ್ಲಿ
ಎಸ್ಎಸ್ಎಲ್ಸಿ ಪರೀಕ್ಷೆ ತೆಗೆದುಕೊಳ್ಳುವ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಸರಿಯಾದ ಶಿಕ್ಷಣದ ವ್ಯವಸ್ಥೆ ಇಲ್ಲ. ಅದನ್ನು ಸರಿ ಮಾಡುವ ಕೆಲಸವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ:ವೀರಗಾಸೆ ಕಲೆಗೆ ಅಪಮಾನವಾಗುವ ದೃಶ್ಯಗಳನ್ನು ತೆಗೆಯಿರಿ: ಸಚಿವ ಸುನಿಲ್ ಕುಮಾರ್