ಕರ್ನಾಟಕ

karnataka

ETV Bharat / state

ಅಧಿಕಾರಕ್ಕಾಗಿ ಲಾಬಿ ಮಾಡಲೇ ಬೇಕು : ಶಾಸಕ ಅಪ್ಪಚ್ಚು ರಂಜನ್ - appachhu ranjan latest news

ಉಮೇಶ್ ಕತ್ತಿ ಶಾಸಕರ ಪ್ರತ್ಯೇಕ ಸಭೆ ನಡೆಸಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಿಗೆ ಅಸಮಾಧಾನ ಇದ್ದೇ ಇರುತ್ತದೆ. ಮಂತ್ರಿ ಸ್ಥಾನಕ್ಕಾಗಿ ಎಲ್ಲರೂ ಲಾಬಿ ಮಾಡುವುದು ಸಹಜ. ಹಾಗೆಂದ ಮಾತ್ರಕ್ಕೆ ಸರ್ಕಾರಕ್ಕೆ ತೊಂದರೆ ಆಗುತ್ತದೆ. ಮುಖ್ಯಮಂತ್ರಿಯವರನ್ನು ಸ್ಥಾನದಿಂದ ಕೆಳಗೆ ಇಳಿಸುತ್ತಾರೆ ಅನ್ನೋದೆಲ್ಲ ಸುಳ್ಳು ಎಂದು ಶಾಸಕ ಅಪ್ಪಚ್ಚು ರಂಜನ್​ ಹೇಳಿದರು.

appachhu ranjan
ಶಾಸಕ ಅಪ್ಪಚ್ಚು ರಂಜನ್​

By

Published : May 29, 2020, 8:51 PM IST

ಮಡಿಕೇರಿ: ಯಾರೇ ಆದರೂ ಅಧಿಕಾರ ಹಿಡಿಯಬೇಕೆಂದರೆ ರಾಜಕೀಯ ಲಾಬಿ ಮಾಡಲೇ ಬೇಕಾಗುತ್ತದೆ ಎಂದು ಶಾಸಕ ಅಪ್ಪಚ್ಚು ರಂಜನ್​ ಅಭಿಪ್ರಾಯ ವ್ಯಕ್ತಪಡಿಸಿದರು.

ಉಮೇಶ್ ಕತ್ತಿ ಶಾಸಕರ ಪ್ರತ್ಯೇಕ ಸಭೆ ನಡೆಸಿದ್ದಾರೆ ಎನ್ನುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಿಗೆ ಅಸಮಾಧಾನ ಇದ್ದೇ ಇರುತ್ತದೆ. ಮಂತ್ರಿ ಸ್ಥಾನಕ್ಕಾಗಿ ಎಲ್ಲರೂ ಲಾಬಿ ಮಾಡುವುದು ಸಹಜ. ಹಾಗೆಂದ ಮಾತ್ರಕ್ಕೆ ಸರ್ಕಾರಕ್ಕೆ ತೊಂದರೆ ಆಗುತ್ತದೆ. ಮುಖ್ಯಮಂತ್ರಿಯವರನ್ನು ಸ್ಥಾನದಿಂದ ಕೆಳಗೆ ಇಳಿಸುತ್ತಾರೆ ಅನ್ನೋದೆಲ್ಲ ಸುಳ್ಳು. ಅವರವರ ಅಧಿಕಾರ ಉಳಿಸಿಕೊಳ್ಳಲು ಇದೆಲ್ಲವೂ ಸಾಮಾನ್ಯ. ಇದೆಲ್ಲವನ್ನು ರಾಜ್ಯ ಮತ್ತು ಕೇಂದ್ರ ನಾಯಕರು ನೋಡಿಕೊಳ್ಳುತ್ತಾರೆ ಎಂದರು.

ಶಾಸಕ ಅಪ್ಪಚ್ಚು ರಂಜನ್​ ಹೇಳಿಕೆ

ನಾನು ಯಾರೊಂದಿಗೂ ಸಭೆಯಲ್ಲಿ ಭಾಗವಹಿಸಿಲ್ಲ. ಅವರ ಸಂಪರ್ಕದಲ್ಲೂ ಇಲ್ಲ. ಬೇಕಿದ್ದರೆ ನೇರವಾಗಿ ಸಿಎಂ ಹಾಗೂ ರಾಷ್ಟ ನಾಯಕರೊಂದಿಗೆ ಮಾತನಾಡುತ್ತೇನೆ. ಮೊದಲ ಬಾರಿ ಶಾಸಕನಾದವನಿಗೆ ಸಚಿವ ಸ್ಥಾನ ಸಿಗುತ್ತದೆ ಅನ್ನೋದಾದರೆ, ಐದು ಬಾರಿ ಶಾಸಕನಾಗಿರುವವನಿಗೆ ಸಚಿವ ಸ್ಥಾನ ಬೇಡವೇ ? ನಾನು ಕೂಡ ನೂರಕ್ಕೆ ನೂರರಷ್ಟು ಸಚಿವ ಸ್ಥಾನದ ಆಕಾಂಕ್ಷಿಯೇ. ಸದ್ಯದಲ್ಲೇ ‌ಮತ್ತೊಮ್ಮೆ ಸಂಪುಟ ವಿಸ್ತರಣೆ ಆಗುತ್ತದೆ ಆಗ ನೋಡೋಣ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.

ABOUT THE AUTHOR

...view details