ಕೊಡಗು: ಹೈದರಾಬಾದ್ ಅತ್ಯಾಚಾರ ಆರೋಪಿಗಳ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಪೊಲೀಸರು ಸರಿಯಾಗಿ ಶಿಕ್ಷೆ ಕೊಟ್ಟಿದ್ದಾರೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.
'ದಿಶಾ ಹತ್ಯಾಚಾರಿ'ಗಳಿಗೆ ಪೊಲೀಸರು ಸರಿಯಾದ ಶಿಕ್ಷೆ ಕೊಟ್ಟಿದ್ದಾರೆ: ಅಪ್ಪಚ್ಚು ರಂಜನ್ - ಪ್ರಿಯಾಂಕ ಅತ್ಯಾಚಾರಿಗಳ ಎನ್ಕೌಂಟರ್ ಅಪ್ಪಚ್ಚು ರಂಜನ್ ಹೇಳಿಕೆ
ಪಶುವೈದ್ಯೆ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಗಳಿಗೆ ಪೊಲೀಸರು ಸರಿಯಾಗಿ ಶಿಕ್ಷೆ ಕೊಟ್ಟಿದ್ದಾರೆ ಎಂದು ಶಾಸಕ ಅಪ್ಪಚ್ಚು ರಂಜನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
!['ದಿಶಾ ಹತ್ಯಾಚಾರಿ'ಗಳಿಗೆ ಪೊಲೀಸರು ಸರಿಯಾದ ಶಿಕ್ಷೆ ಕೊಟ್ಟಿದ್ದಾರೆ: ಅಪ್ಪಚ್ಚು ರಂಜನ್ appacchur-ranjan-reaction-on-hyderab-rapist-encounter](https://etvbharatimages.akamaized.net/etvbharat/prod-images/768-512-5292610-thumbnail-3x2-mla.jpg)
ಹೈದ್ರಾಬಾದ್ ಪೊಲೀಸ್ ಎನ್ಕೌಂಟರ್ ಕುರಿತು ಶಾಸಕ ಅಪ್ಪಚ್ಚು ರಂಜನ್ ಪ್ರತಿಕ್ರಿಯೆ
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂತಹ ಅತ್ಯಾಚಾರ ಆರೋಪಿಗಳಿಗೆ ಗುಂಡಿಕ್ಕಿ ಕೊಲ್ಲುವುದೇ ಸೂಕ್ತ. ಹೈದ್ರಾಬಾದ್ ಪೊಲೀಸರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಎನ್‌ಕೌಂಟರ್ ಮಾಡಿದ್ದು ಸೂಕ್ತ ಅಲ್ಲ ಅನ್ನೋ ಮೇನಕಾ ಗಾಂಧಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೇನಕಾ ಗಾಂಧಿ ಸಂಬಂಧಿಕರಿಗೆ ಈ ರೀತಿ ಅಗಿದ್ದರೆ ನೋವು ಗೊತ್ತಾಗುತ್ತಿತ್ತು. ಯಾರಿಗೋ ಆಗಿರೋದಕ್ಕೆ ಅವರಿಗೆ ನೋವು ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.
ಹೈದ್ರಾಬಾದ್ ಪೊಲೀಸ್ ಎನ್ಕೌಂಟರ್ ಕುರಿತು ಶಾಸಕ ಅಪ್ಪಚ್ಚು ರಂಜನ್ ಪ್ರತಿಕ್ರಿಯೆ