ಕೊಡಗು :ಮಂಗಳೂರು ಪೌರತ್ವ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‌ಗೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿ ಕುರಿತಂತೆ ಶಾಸಕ ಅಪ್ಪಚ್ಚು ರಂಜನ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಸ್ಥಾನ ಕಳೆದುಕೊಂಡ ಹೆಚ್ಡಿಕೆ ಇಂತಹ ಮಾತುಗಳನ್ನು ಹೇಳ್ತಾರೆ : ಅಪ್ಪಚ್ಚು ರಂಜನ್ - ಮಂಗಳೂರು ಗಲಭೆ ಸಿಡಿ ಕುರಿತು ಅಪ್ಪಚ್ಚು ರಂಜನ್ ಹೇಳಿಕೆ ಸುದ್ದಿ
ಕುಮಾರಸ್ವಾಮಿ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡು, ಕೆಲಸವಿಲ್ಲದೆ ಮೂಲೆಯಲ್ಲಿ ಕುಳಿತುಕೊಳ್ಳುವಂತೆ ಆಗಿದೆ. ಹೀಗಾಗಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂದು ಮಂಗಳೂರು ಗಲಭೆ ಸಿಡಿ ಬಿಡುಗಡೆ ವಿಚಾರವಾಗಿ ಶಾಸಕ ಅಪ್ಪಚ್ಚು ರಂಜನ್ ವ್ಯಂಗ್ಯವಾಡಿದರು.
ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡು, ಕೆಲಸವಿಲ್ಲದೆ ಮೂಲೆಯಲ್ಲಿ ಕುಳಿತುಕೊಳ್ಳುವಂತೆ ಆಗಿದೆ. ಹೀಗಾಗಿ ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಗಲಭೆ ಸೃಷ್ಟಿಸಲೆಂದೇ ಹಲವರು ಆಟೋದಲ್ಲಿ ಕಲ್ಲುತಂದು ಮುಖಕ್ಕೆ ಬಟ್ಟೆಕಟ್ಟಿ ಹೊಡೆದಿದ್ದಾರೆ. ಇದನ್ನೆಲ್ಲಾ ಮಾಡಿದ್ದು ಯಾರು?. ಇದೆಲ್ಲವೂ ಆಗಿದ್ದು ಶಾಸಕ ಯು. ಟಿ. ಖಾದರ್ ಅವರ ಕುಮ್ಮಕ್ಕಿನಿಂದ. ಖಾದರ್ ಅವರ ಕುಟುಂಬದವರು ಯಾರಾದರೂ ಸತ್ತಿದ್ದಾರಾ? ಅವರ ಕುಟುಂಬದವರು ಸತ್ತಿದ್ರೆ ಖಾದರ್‌ಗೆ ನೋವು ಗೊತ್ತಾಗುತ್ತಿತ್ತು. ಕೂಡಲೇ ಖಾದರ್ ಅವರನ್ನುಬಂಧಿಸಬೇಕು ಎಂದು ಅಪ್ಪಚ್ಚು ರಂಜನ್ ಆಗ್ರಹಿಸಿದ್ದಾರೆ.