ಕೊಡಗು:ಜಿಲ್ಲೆಯಲ್ಲಿ ಕೋವಿಡ್‌ನಿಂದ ಮತ್ತೊಂದು ಸಾವು ವರದಿಯಾಗಿದ್ದು, ಅದರ ಸಂಖ್ಯೆ 28ಕ್ಕೇರಿದೆ. ಮಡಿಕೇರಿ ತಾಲೂಕು ಎಮ್ಮೆಮಾಡು ಗ್ರಾಮದ ನಿವಾಸಿ 50 ವರ್ಷದ ಮೃತಪಟ್ಟ ವ್ಯಕ್ತಿ.
ಕೊಡಗಿನಲ್ಲಿ ಕೊರೊನಾಗೆ ಮತ್ತೊಂದು ಬಲಿ: 28ಕ್ಕೇರಿದ ಮೃತರ ಸಂಖ್ಯೆ - ಕೊರೊನಾಗೆ ಸಾವು
ಕೊಡಗಿನ ಮಡಿಕೇರಿ ತಾಲೂಕು ಎಮ್ಮೆಮಾಡು ಗ್ರಾಮದ ನಿವಾಸಿ 50 ವರ್ಷದ ವ್ಯಕ್ತಿಯೊಬ್ಬರು ಕೊರೊನಾ ಸೋಂಕು ತಗುಲಿ ಮೃತಪಟ್ಟಿದ್ದಾರೆ.
ಅವರು ಹಿಂದಿನಿಂದಲೂ ಅಧಿಕ ರಕ್ತದ ಒತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರು. ಇತ್ತೀಚೆಗೆ ಪಾರ್ಶ್ವವಾಯು ಕೂಡ ಬಂದಿತ್ತು. ಹೀಗಾಗಿ, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಸೆ.8ರಂದು ಕಫ ಸಮಸ್ಯೆಗೆ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ (ಅಶ್ವಿನಿ ಆಸ್ಪತ್ರೆಗೆ) ದಾಖಲಾಗಿದ್ದ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ದೃಢಪಟ್ಟಿತ್ತು.
ತಕ್ಷಣ ಅವರನ್ನು ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿಕೊಳ್ಳಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಅಂತ್ಯ ಸಂಸ್ಕಾರವನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.