ಮಡಿಕೇರಿ(ಕೊಡಗು):ಕಾನೂನು ಸುವ್ಯವಸ್ಥೆ ಕಾಪಾಡುತ್ತ ಸದಾ ಒತ್ತಡದ ಬದುಕು ನಡೆಸುವ ಪೊಲೀಸರಿಗೆ ವಾರ್ಷಿಕ ಕ್ರೀಡಾ ಕೂಟವನ್ನು ಭಾನುವಾರ ಮಡಿಕೇರಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಿತು.
ಮಡಿಕೇರಿಯಲ್ಲಿ ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಜಿಲ್ಲೆಯ 900ಕ್ಕೂ ಹೆಚ್ಚು ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿರೋದು ವಿಶೇಷವಾಗಿತ್ತು. ಯಾವುದೇ ಹಿರಿಯ ಕಿರಿಯ ಎಂಬ ಬೇಧವಿಲ್ಲದೆ ಕ್ರೀಡಾ ಸ್ಫೂರ್ತಿಯನ್ನ ಪ್ರದರ್ಶಿಸಿದರು. ಯಾವಾಗಲೂ ಡ್ಯೂಟಿ ಡ್ಯೂಟಿ ಅಂತ ಕರ್ತವ್ಯದಲ್ಲಿ ಇರುತ್ತಿದ್ದ ಪೊಲೀಸರು ಎಲ್ಲವನ್ನು ಬದಿಗೊತ್ತಿ ಕ್ರೀಡಾ ಕೂಟದಲ್ಲಿ ಸ್ಪರ್ಧಿಸಿದರು.
ಜಿಲ್ಲೆಯ ವಿವಿಧ ಠಾಣೆಗಳಿಂದ ಆಗಮಿಸಿದ ನೂರಾರು ಪೊಲೀಸರು ಕ್ರಿಕೆಟ್ , ವಾಲಿಬಾಲ್, ಕಬಡ್ಡಿ ಮತ್ತು ಟ್ರಾಕ್ ಆ್ಯಂಡ್ ಫೀಲ್ಡ್ ಆಟಗಳಲ್ಲಿ ಸ್ಪರ್ಧಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಕ್ರೀಡೆಗಳನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರು ಸಿಳ್ಳೆ ಚಪ್ಪಾಳೆ ಹಾಕಿ ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಿದರು.