ಕೊಡಗು:ಅನಾರೋಗ್ಯದಿಂದ ಮನನೊಂದ ವೃದ್ಧನೋರ್ವ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ವಿರಾಜಪೇಟೆಯ ಮೀನುಪೇಟೆ ಕಾಮಧೇನು ಬಡಾವಣೆಯಲ್ಲಿ ನಡೆದಿದೆ.
ಅಚ್ಚಪಂಡ ತಮ್ಮಯ್ಯ (94) ಎಂಬುವರೆ ಮೃತ ವೃದ್ಧ. ಇವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತಮ್ಮಯ್ಯ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲ ದಿನಗಳಿಂದ ಇವರ ಆರೋಗ್ಯ ತೀರ ಹದಗೆಟ್ಟಿತ್ತು ಎನ್ನಲಾಗ್ತಿದೆ.