ಕೊಡಗು: ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಯು ರೈತರು ಬೆಳೆದ ಕಾಳು ಮೆಣಸು, ಕಾಫಿಗಿಡಗಳನ್ನು ಕಿತ್ತು ಎಸೆದಿದ್ದಾರೆಂದು ಆರೋಪಿಸಿರುವ ಪ್ರಕರಣ ಮಡಿಕೇರಿ ತಾಲೂಕಿನ ಹೆಬ್ಬೆಟಗೇರಿ ಗ್ರಾಮದಲ್ಲಿ ನಡೆದಿದೆ.
ಹೆಬ್ಬೆಟಗೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಹಲವು ಕುಟುಂಬಗಳು ಈಗಾಗಲೇ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿವೆ. ಹೀಗಿದ್ದರೂ ಯಾವುದೇ ಸೂಚನೆ ನೀಡದೆ ಏಕಾಏಕಿ ಅರಣ್ಯ ಇಲಾಖೆ ಸಿಬ್ಬಂದಿ ಬೆಳೆದಿದ್ದ ಕಾಫಿ, ಕಾಳು ಮೆಣಸು ಬಳ್ಳಿ, ಬಾಳೆ ಮತ್ತು ಪೈನಾಫಲ್ ಬೆಳೆಗಳನ್ನು ನಾಶ ಮಾಡಿದ್ದಾರೆ.