ಕೊಡಗು :ಈಗ ಭಾರತದ ಪ್ರಜಾಪ್ರಭುತ್ವ ಕರಾಳ ದಿನನಗಳನ್ನು ಎದುರಿಸುತ್ತಿದೆ. ಈವರೆಗೆ ಪ್ರತಿಪಕ್ಷದ 141 ಸಂಸದರನ್ನು ಸಸ್ಪೆಂಡ್ ಮಾಡಲಾಗಿದೆ. ಇನ್ನೂ ಹಲವರನ್ನ ಬಿಜೆಪಿ ಸಸ್ಪೆಂಡ್ ಮಾಡುತ್ತೆ ಎಂದು ಎಐಸಿಸಿ ವಕ್ತಾರ ಲಕ್ಷ್ಮಣ್ ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ್ರತಾಪ್ ಸಿಂಹರ ಐಟಿ ಸೆಲ್‌ನಲ್ಲಿ ಮನೋರಂಜನ್ ಕೆಲಸ ಮಾಡ್ತಿದ್ದ. ಪ್ರತಾಪ್ ಸಿಂಹ ಅವರ ಕೊಡಗು, ಮೈಸೂರು ಕಚೇರಿ ಸೀಜ್ ಮಾಡ್ಬೇಕು. ಪ್ರತಾಪ್ ಸಿಂಹಗೂ ಮನೋರಂಜನ್ ಟೀಂಗೂ ಇರೋ ಸಂಬಂಧವೇನು? ಬಿಜೆಪಿ ಅಂದ್ರೆ ದಿಕ್ಟೇಟರಿಯಲ್ ಓರಿಯೆಂಟೆಡ್ ಆಗಿರುವ ಪಾರ್ಟಿ. ಬಿಜೆಪಿ ಅಂದ್ರೆ ಅಧಿಕಾರಕ್ಕೆ ದೇಶವನ್ನೇ ಬಿಟ್ಟುಕೊಡುವ ಪಕ್ಷವಾಗಿದೆ. ಮನೋರಂಜನ್ ಕಾಂಬೋಡಿಯಾಗೆ ಹೋಗಿ ತರಬೇತಿ ಪಡೆದಿದ್ದಾನೆ ಎಂದರು.
ಪ್ರತಾಪ್ ಸಿಂಹ ಮನೋರಂಜನ್ ಟೀಂ ಜೊತೆ ಸಂಪರ್ಕದಲ್ಲಿದ್ದಾರೆ. ಪ್ರತಾಪ್ ಸಿಂಹ ಅಕೌಂಟ್‌ನಿಂದ ಅವರಿಗೆ ದುಡ್ಡು ರವಾನೆಯಾಗಿದೆ ಎಂದು ಮಡಿಕೇರಿಯಲ್ಲಿ ಎಐಸಿಸಿ ವಕ್ತಾರ ಲಕ್ಷ್ಮಣ್ ಗಂಭೀರ ಆರೋಪ ಮಾಡಿದ್ದಾರೆ. ಲೆಹರ್ ಸಿಂಗ್ ಅವರ ಹೇಳಿಕೆ ಬೇಜವಾಬ್ದಾರಿ ಸ್ಟೇಟ್‌ಮೆಂಟ್, ಸಿದ್ದರಾಮಯ್ಯ ಮಗ ಲೋಕಸಭಾ ಚುನಾವಣಾ ಆಕಾಂಕ್ಷಿ ಅಲ್ಲ, ಸಿಎಂ ಸಿದ್ದರಾಮಯ್ಯ ಎಲ್ಲಿ ಸಂಸದ ಪ್ರತಾಪ್ ಸಿಂಹ ಎಲ್ಲಿ? ಎಂದು ಟೀಕೆ ಮಾಡಿದರು.
ಸಂಸದರನ್ನು ಮೊದಲು ಸಸ್ಪೆಂಡ್ ಮಾಡಿ : ಬಿಜೆಪಿ ಅಂಡ್ ಪ್ರತಾಪ್ ಸಿಂಹ ಈಗಾಗಲೇ ಟ್ರ್ಯಾಪ್ ಆಗಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ವಿಚಾರ ಹೇಳಿದ್ದು ಹುಬ್ಬಳ್ಳಿಯವರು. ಅವರಿಗೂ ನಮಗೂ ಸಂಬಂಧ ಇಲ್ಲ. 2015ರಲ್ಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಿ ಅಂತ ನಾವು ಪತ್ರ ಬರೆದಿದ್ದೇವೆ. ಇನ್ನು ಸುಖಾ ಸುಮ್ಮನೆ ಮಾತಾಡುವ ಪ್ರಹ್ಲಾದ್ ಜೋಶಿ ಬುರುಡೆ ದಾಸ, ಮಾನ ಮರ್ಯಾದೆ ಇದ್ರೆ ಪ್ರತಾಪ್ ಸಿಂಹನ ಮೊದಲು ಸಸ್ಪೆಂಡ್ ಮಾಡಿ ಎಂದು ಮಡಿಕೇರಿಯಲ್ಲಿ ಎಐಸಿಸಿ ವಕ್ತಾರ ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ತನಿಖೆಯ ದಿಕ್ಕು ತಪ್ಪಿಸಲು ಬಿಜೆಪಿ ಯತ್ನ : ಸಂಸತ್ ಭದ್ರತಾ ಲೋಪ ಪ್ರಕರಣವು ತನಿಖೆಯ ಹಂತದಲ್ಲಿರುವಾಗಲೇ ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿಯವರು ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು ಡಿಸೆಂಬರ್ 17 ರಂದು ದೂರಿದ್ದರು. ಮೈಸೂರು ನಗರ ಕಾಂಗ್ರೆಸ್ ಕಚೇರಿಯಲ್ಲಿ ಅಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಸಂಸತ್‌ನಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಯ ಕುರಿತು ಲೆಹರ್ ಸಿಂಗ್ ನೀಡಿರುವ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಪ್ರಕರಣವು ತನಿಖೆಯ ಹಂತದಲ್ಲಿರುವಾಗಲೇ ಬಿಜೆಪಿ ನಾಯಕರು ಅನಗತ್ಯ ಹೇಳಿಕೆಗಳನ್ನು ನೀಡುವ ಮೂಲಕ ದಿಕ್ಕು ತಪ್ಪಿಸುತ್ತಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ:ಸಂಸತ್ ಭದ್ರತಾ ಲೋಪ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸಲು ಬಿಜೆಪಿ ಯತ್ನ: ಎಂ.ಲಕ್ಷ್ಮಣ್