ಕರ್ನಾಟಕ

karnataka

ಇಬ್ಬರು ವೃದ್ಧ ಮಹಿಳೆಯರನ್ನ ಕಟ್ಟಿಹಾಕಿ ದರೋಡೆ: ದೂರು ದಾಖಲು

By

Published : Feb 3, 2022, 6:58 AM IST

ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಿಗೇರಿಯಲ್ಲಿ ಇಬ್ಬರು ವಯೋವೃದ್ಧ ಮಹಿಳೆಯರನ್ನು ಮನೆಯೊಳಗೆ ಕಟ್ಟಿ ಹಾಕಿ 2.5 ಲಕ್ಷ ನಗದು ಹಾಗೂ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.

Aged women attacked and robbed by miscreants at madikeri
ಇಬ್ಬರು ವೃದ್ಧ ಮಹಿಳೆಯರನ್ನ ಕಟ್ಟಿಹಾಕಿ ದರೋಡೆ ಮಾಡಿದ ಖದೀಮರು

ಕೊಡಗು: ಇಬ್ಬರು ಮಹಿಳೆಯರನ್ನು ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಿಗೇರಿಯಲ್ಲಿ ನಡೆದಿದೆ.

ಸೋಮವಾರ ತಡರಾತ್ರಿ ನಾಲ್ವರು ಅಪರಿಚಿತರು ಸಹೋದರಿಯರಾದ ಜಾನಕಿ (78) ಮತ್ತು ಅಮ್ಮಕ್ಕಿ (68) ಅವರು ವಾಸವಿದ್ದ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಇಬ್ಬರು ವಯೋವೃದ್ಧರನ್ನ ಮನೆಯೊಳಗೆ ಕಟ್ಟಿ ಹಾಕಿ 2.5 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ.

ಇಬ್ಬರು ವೃದ್ಧ ಮಹಿಳೆಯರನ್ನ ಕಟ್ಟಿಹಾಕಿ ದರೋಡೆ ಮಾಡಿದ ಖದೀಮರು

ಹೌದು, ಮನೆಯೊಳಗೆ ನುಗ್ಗಿದ ನಾಲ್ವರು ದುಷ್ಕರ್ಮಿಗಳು ಮಹಿಳೆಯರನ್ನು ಕೋಣೆಯೊಂದರಲ್ಲಿ ಕಟ್ಟಿ ಹಾಕಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ನಂತರ ಕೈಗೆ ಕಟ್ಟಿದ ಹಗ್ಗವನ್ನು ಬಿಚ್ಚಿಕೊಂಡು ಬೆಂಗಳೂರಿನಲ್ಲಿರುವ ಸಹೋದರ, ನಿವೃತ್ತ ನ್ಯಾಯಧೀಶ ಬೋಪಯ್ಯ ಅವರಿಗೆ ಅಜ್ಜಿಯರು ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಬೋಪ್ಪಯ್ಯ ನಾಪೋಕ್ಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆಯಲ್ಲಿ ಸಹೋದರಿಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆಗಾಗಿ ನಾಪೋಕ್ಲು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ಕೆಲವು ದಿನಗಳಿಂದ ಹೊಂಚು ಹಾಕಿ‌ ಮನೆಯ ಬಗ್ಗೆ ಮಾಹಿತಿ‌ ತಿಳಿದು ದರೋಡೆ ಮಾಡಿದ್ದಾರೆ ಎನ್ನಲಾಗಿದೆ. ಇಬ್ಬರು ವೃದ್ಧರು ಸರ್ಕಾರಿ ನೌಕರಿಯಿಂದ ನಿವೃತ್ತಿಯಾಗಿದ್ದು, ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಮಹಿಳೆಯರೇ ಇರುವ ಒಂಟಿ ಮನೆಗಳ ಮೇಲೆ ಕಳ್ಳರ ದಾಳಿ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ಮೂರು ದಿನದಲ್ಲಿ ಎರಡು ಪ್ರಕರಣಗಳು ನಡೆದಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಗೋಣಿಕೊಪ್ಪ ಸಮೀಪದ ಕಾಫಿತೋಟದಲ್ಲಿ ಒಂಟಿ ಮಹಿಳೆ ಮತ್ತು ಮಗು ಇದ್ದ ಮನೆಗೆ ನುಗ್ಗಲು ಖದೀಮರು ಯತ್ನಿಸಿದ್ದು, ಮಹಿಳೆಯ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿತ್ತು. ಇದೀಗ ಒಂಟಿ ‌ಮನೆಯಲ್ಲಿ ವಾಸವಿದ್ದ ಇಬ್ಬರು ವೃದ್ಧ ಮಹಿಳೆಯರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details