ಕರ್ನಾಟಕ

karnataka

ETV Bharat / state

ಸಾಕಪ್ಪ..ಸಾಕು ... ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆರಾಯ.. ಮತ್ತೆ ಆತಂಕದಲ್ಲಿ ಕೊಡಗಿನ ಜನತೆ - kodagu latest news

ಧಾರಕಾರ ಮಳೆ ಸುರಿದು ಜನ - ಜೀವನ ಅಸ್ತವ್ಯಸ್ತಗೊಳಿಸಿ ಕೆಲವು ದಿನಗಳ ಕಾಲ ಬಿಡುವು ಕೊಟ್ಟಿದ್ದ ಮಳೆರಾಯ ಈಗ ಮತ್ತೆ ಅವಾಂತರ ಸೃಷ್ಟಿಸಲು ಆಗಮಿಸುತ್ತಿದ್ದಾನೆ. ಆದ್ದರಿಂದ ಹವಾಮಾನ ಇಲಾಖೆ ಸುರಕ್ಷಿತ ಸ್ಥಳಗಳತ್ತ ಹೋಗುವಂತೆ ಜನರಿಗೆ ಸೂಚಿಸಿದೆ.

Again rainfall at kodagu..people scared

By

Published : Sep 5, 2019, 9:14 PM IST

Updated : Sep 5, 2019, 9:41 PM IST

ಕೊಡಗು:ಸಾಕಪ್ಪ..ಸಾಕು ಎನ್ನುವಷ್ಟು ಅವಾಂತರ ಸೃಷ್ಟಿಸಿ ಮರೆಯಾಗಿದ್ದ ಮಳೆರಾಯ, ಜಿಲ್ಲೆಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾನೆ.‌ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆ ಮಧ್ಯಾಹ್ನ ತುಸು ಬಿಡುವು ಕೊಟ್ಟಿದ್ದರೂ ಮತ್ತೆ ಯಾವಾಗ ಅಬ್ಬರಿಸಿ ನೆಮ್ಮದಿಯನ್ನು ಕಸಿಯುತ್ತದೋ ಎಂಬ ಭೀತಿಯಲ್ಲೇ ಇದ್ದಾರೆ ಜನ..!!

ಕೊಡಗು ಜಿಲ್ಲೆಯಲ್ಲಿ ಮಳೆ ಶುರುವಾದ್ರೆ ಸಾಕು ಸ್ಥಳೀಯರಿಗೆ ಆತಂಕ ಮೂಡುತ್ತಿದೆ. ಮೂರು ದಿನಗಳಿಂದ ಸುರಿದ ಮಳೆಗೆ ಕಾವೇರಿ ಕೊಳ್ಳದಲ್ಲಿ ನೀರಿನ ಮಟ್ಟ ಏರಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿರುವ ಪರಿಣಾಮ ಭಾಗಮಂಡಲ - ತಲಕಾವೇರಿ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದೆ. ಭಗಂಡೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತರು, ನೀರಿನಲ್ಲಿ ಕಟ್ಟಿದ ಹಗ್ಗವನ್ನೇ ಆಶ್ರಯಿಸಿದ್ದಾರೆ.

ಕೊಡಗಿನಲ್ಲಿ ಧಾರಾಕಾರ ಮಳೆ
ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಗೆ ನಾವು ಹೈರಾಣಾಗಿದ್ದೇವೆ. ತಲಕಾವೇರಿ-ಭಾಗಮಂಡಲ ಸಂಪರ್ಕಿಸುವ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರ ನೀಷೇಧಿಸಲಾಗಿದೆ. ದಿನ ಬಳಕೆಯ ವಸ್ತುಗಳನ್ನು ತರಲೂ ಕಷ್ಟವಾಗುತ್ತಿದೆ. ಮಳೆ ನಿಂತರೆ ಪರವಾಗಿಲ್ಲ. ಇಲ್ಲವಾದರೆ ಬಹಳ ಕಷ್ಟ ಎನ್ನುತ್ತಾರೆ ಸ್ಥಳೀಯ ನಿವಾಸಿ ನಾಗೇಶ್.

ಮಳೆ ಕಡಿಮೆ ಆಯ್ತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದೆವು.‌ ಇದೀಗ ಮತ್ತೆ ಮಳೆ ಶುರುವಾಗಿ ಆತಂಕ ಸೃಷ್ಟಿಸಿದೆ.‌ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಮೇಲೆಲ್ಲ ಬರೆ ಮಣ್ಣು ಜರಿಯುತ್ತಿದೆ. ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಭೂ ಕುಸಿತದಿಂದ ಕಣ್ಮರೆಯಾದ ನಾಲ್ಕು ಮಂದಿ ಇನ್ನೂ ಪತ್ತೆ ಆಗಲಿಲ್ಲ. ಜೊಡುಪಾಲದಲ್ಲಿ ಕಳೆದ ಬಾರಿ ಭೂಕುಸಿತವಾದ ಪ್ರದೇಶದ ಆಸು-ಪಾಸಿನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ನಿವಾಸಿ ಇಬ್ರಾಹಿಂ.

Last Updated : Sep 5, 2019, 9:41 PM IST

ABOUT THE AUTHOR

...view details