ಕೊಡಗು:ವಿಚಾರಣೆಗೆ ಕರೆತಂದ ವಿಚಾರಣಾಧೀನ ಕೈದಿಯೊಬ್ಬ ಕುಶಾಲನಗರದ ನ್ಯಾಯಾಲಯದ ಆವರಣದಿಂದಲೇ ಪೊಲೀಸರ ಕಣ್ತಪ್ಪಿಸಿ ಕಾಲ್ಕಿತ್ತಿದ್ದಾನೆ.
ಸೋಮವಾರಪೇಟೆ ತಾಲೂಕಿನ ಯಡವನಾಡು ಸೂಳೆಬಾವಿ ಗ್ರಾಮದ ನಿವಾಸಿ ರಾಮು ಪರಾರಿಯಾದ ಆರೋಪಿ ಎಂದು ತಿಳಿದು ಬಂದಿದೆ.
ಕೊಡಗು:ವಿಚಾರಣೆಗೆ ಕರೆತಂದ ವಿಚಾರಣಾಧೀನ ಕೈದಿಯೊಬ್ಬ ಕುಶಾಲನಗರದ ನ್ಯಾಯಾಲಯದ ಆವರಣದಿಂದಲೇ ಪೊಲೀಸರ ಕಣ್ತಪ್ಪಿಸಿ ಕಾಲ್ಕಿತ್ತಿದ್ದಾನೆ.
ಸೋಮವಾರಪೇಟೆ ತಾಲೂಕಿನ ಯಡವನಾಡು ಸೂಳೆಬಾವಿ ಗ್ರಾಮದ ನಿವಾಸಿ ರಾಮು ಪರಾರಿಯಾದ ಆರೋಪಿ ಎಂದು ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಈತ ಪತ್ನಿಯನ್ನೇ ಕೊಲೆ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ. ಕುಶಾಲನಗರದ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ವಿಚಾರಣೆಗೆ ಆರೋಪಿಯನ್ನು ಕರೆ ತರಲಾಗಿತ್ತು. ಮೂತ್ರ ವಿಸರ್ಜನೆಗೆ ಎಂದು ಸಿಬ್ಬಂದಿಗೆ ಹೇಳಿ ಹೋಗಿದ್ದ ರಾಮು ಶೌಚಾಲಯದ ಕಿಟಕಿಯಿಂದ ಎಸ್ಕೇಪ್ ಆಗಿದ್ದಾನೆ.
ಆರೋಪಿ ಪತ್ತೆಗೆ ಕುಶಾಲನಗರ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ.