ಸೋಮವಾರಪೇಟೆ (ಕೊಡಗು):ಬೈಕ್ ಹಾಗೂ ಪಿಕಪ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಶನಿವಾರಸಂತೆ ನಗರದ ಪೇಟೆಯಲ್ಲಿ ದುರ್ಘಟನೆ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ಸಮೀಪದ ಕೌಕೊಡಿ ಗ್ರಾಮದ ನಿವಾಸಿ ವಿಜಯ್ (27) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬ ಹಿಂಬದಿ ಸವಾರ ಮುಜಾಹಿದ್ ಎಂಬುವವರಿಗೆ ತೀವ್ರ ಪೆಟ್ಟಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್-ಪಿಕಪ್ ನಡುವೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು - ಬೈಕ್ ಅಪಘಾತ
ಬೈಕ್ ಹಾಗೂ ಪಿಕಪ್ ವಾಹನದ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಶನಿವಾರ ಸಂತೆ ನಗರದ ಪೇಟೆಯಲ್ಲಿ ನಡೆದಿದೆ.
![ಬೈಕ್-ಪಿಕಪ್ ನಡುವೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು accident between Bike and Pickup van: A bike rider dies on the spot!](https://etvbharatimages.akamaized.net/etvbharat/prod-images/768-512-7073995-507-7073995-1588696377032.jpg)
ಬೈಕ್-ಪಿಕಪ್ ನಡುವೆ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು..!
ಸಂಜೆ ಇಬ್ಬರು ಬೈಕ್‌ನಲ್ಲಿ ಹೊಸೂರುವಿನಿಂದ ಶನಿವಾರಸಂತೆಗೆ ಬಂದಿದ್ದರು. ಶನಿವಾರಸಂತೆಯ ಕೆಆರ್‌ಸಿ ವೃತ್ತದ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನ ಹಾಗೂ ಕೆಆರ್‌ಸಿ ವೃತ್ತದಿಂದ ಗುಡುಗಳಲೆ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.