ಸೋಮವಾರಪೇಟೆ (ಕೊಡಗು):ಕಾಫಿ ತೋಟದ ಸರ್ವೆ ಮಾಡಲು ಸತಾಯಿಸಿ ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ತಾಲೂಕಿನ ಸರ್ವೆ ಕಚೇರಿಯಲ್ಲಿ ನಡೆದಿದೆ.
ಸೋಮವಾರಪೇಟೆ: ಲಂಚಕ್ಕೆ ಬೇಡಿಕೆ ಇಟ್ಟ ಸರ್ವೇಯರ್ ಎಸಿಬಿ ಬಲೆಗೆ - ACB attacked the somavarapete Surveyor Dilip
ಸೋಮಯ್ಯ ಎಂಬುವರ ಕಾಫಿ ತೋಟದ ಸರ್ವೆಗೆ 25 ಸಾವಿರ ರೂ ಕೊಡುವಂತೆ ಬೇಡಿಕೆ ಇಟ್ಟಿದ್ದ ಸೋಮವಾರಪೇಟೆ ಸರ್ವೇಯರ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕಾಫಿ ತೋಟದ ಸರ್ವೆಗೆ ಬೇಡಿಕೆ ಇಟ್ಟಿದ್ದ ಸರ್ವೇಯರ್ ಎಸಿಬಿ ಬಲೆಗೆ
ದಿಲೀಪ್ ಎಸಿಬಿ ಬಲೆಗೆ ಬಿದ್ದ ಸರ್ವೇಯರ್. ಇವರು ಸೋಮಯ್ಯ ಎಂಬುವರ ಕಾಫಿ ತೋಟದ ಸರ್ವೆಗೆ 25 ಸಾವಿರ ಕೊಡುವಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ದೊರೆತಿದೆ. ಇಂದು ಸೋಮಯ್ಯ ಅವರಿಂದ ಸೋಮವಾರಪೇಟೆಯ ಸರ್ವೇ ಕಚೇರಿಯಲ್ಲೇ ಅಕ್ರಮವಾಗಿ ಹಣ ಪಡೆಯುವ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.