ಕರ್ನಾಟಕ

karnataka

ETV Bharat / state

ಗ್ರಾಮಸ್ಥರು,ಅಂಗನವಾಡಿ ಸಹಾಯಕಿ ಜಗಳ; ಜಾತಿಯೋ,ಕಳ್ಳತನವೋ..? ಹೀಗೊಂದು ಸಮಸ್ಯೆ - kodagu district anganavadi news

ಅಂಗನವಾಡಿ ಸಹಾಯಕಿಗೆ ಕಳ್ಳತನದ ಆರೋಪ ಹೊರಿಸಿರುವ ಗ್ರಾಮಸ್ಥರು, ನಮ್ಮೂರಿಗೆ ಆ ಸಹಾಯಕಿ ಬೇಡವೇ ಬೇಡ. ಅವರನ್ನು ಬದಲಿಸುವವರೆಗೆ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲ್ಲ ಎಂದು ಹಟ ಹಿಡಿದಿರುವುದರಿಂದ ಅಂಗನವಾಡಿ ಬಿಕೋ ಎನ್ನುತ್ತಿದೆ.

ನವಗ್ರಾಮ ಅಂಗನವಾಡಿ ಕೇಂದ್ರ

By

Published : Sep 17, 2019, 10:55 PM IST

ಕೊಡಗು : ಅಂಗನವಾಡಿ ಕೇಂದ್ರದ ಸಹಾಯಕಿ 'ಕೆಳಜಾತಿ'ಗೆ ಸೇರಿದವಳು ಎಂದು ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೂಡ್ಲೂರು ಸಮೀಪದ ನವಗ್ರಾಮದಲ್ಲಿನಡೆದಿದೆ.

ಅಂಗನವಾಡಿ ಸಹಾಯಕಿಗೆ ಕಳ್ಳತನದ ಆರೋಪ ಮಾಡಿರುವ ಗ್ರಾಮಸ್ಥರು ನಮ್ಮೂರಿಗೆ ಆ ಸಹಾಯಕಿ ಬೇಡವೇ ಬೇಡ. ಅವರನ್ನು ಬದಲಿಸುವವರೆಗೆ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲ್ಲ ಎಂದು ಹಟ ಹಿಡಿದಿರುವುದರಿಂದ ಅಂಗನವಾಡಿ ಬಿಕೋ ಎನ್ನುತ್ತಿದೆ. ಮಕ್ಕಳಿಗೆ ಕೊಡಬೇಕಾದ ವಸ್ತುಗಳೆಲ್ಲ ಆಕೆ ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಅಲ್ಲದೆ ಸರಿಯಾದ ಸಮಯಕ್ಕೆ ಕೆಲಸಕ್ಕೂ ಬರುವುದಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಜಾತಿ ನಿಂದನೆಯ ಆರೋಪ ಮಾಡುತ್ತಾರೆ ಎನ್ನುತ್ತಿದ್ದಾರೆ.

ಗ್ರಾಮಸ್ಥರು ಮತ್ತು ಅಂಗನವಾಡಿ ಸಹಾಯಕಿ ಜಗಳ

ಆದರೆ ಇದನ್ನು ಅಲ್ಲಗಳೆದಿರುವ ಅಂಗನವಾಡಿ ಸಹಾಯಕಿ ಶಾಂತಾ, ನಾನು ಕೆಳ ಜಾತಿಗೆ ಸೇರಿದವಳು ಎಂಬ ಕಾರಣಕ್ಕೆ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಲಾಗಿದೆ. ಕೆಲಸಕ್ಕೆ ಬಾರದಂತೆ ಅಂಗನವಾಡಿ ಶಿಕ್ಷಕಿಯೂ ಕೂಡ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಹದಿನೈದು ಕೆ.ಜಿ.ಯಷ್ಡು ಅಕ್ಕಿಯನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ತರಲು ಆಗುತ್ತದೆಯೇ? ಅವರಿಗೆ ನಾನು ಅಲ್ಲಿ ಕೆಲಸ ಮಾಡುವುದು ಇಷ್ಟವಿಲ್ಲ ಅಷ್ಟೇ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ABOUT THE AUTHOR

...view details