ಕರ್ನಾಟಕ

karnataka

ETV Bharat / state

ಒಂದು ಮಾತನಾಡದೆ ಮೌನ ಪ್ರೀತಿ ಮಾಡಿದೆ: ಹಾಡಿನ ಮೂಲಕ ಅಪ್ಪು ನೆನೆದು ಭಾವುಕರಾದ ವೃತ್ತ ನಿರೀಕ್ಷಕ

ಅಪ್ಪು ಅಗಲಿ ನಾಲ್ಕು ತಿಂಗಳು ಕಳೆದ್ರು ಕೂಡ ಅಭಿಮಾನಿಗಳ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ. ಪುನೀತ್ ರಾಜ್‍ಕುಮಾರ್ ಮಾಡಿರುವ ಸಮಾಜ ಸೇವೆಯನ್ನ ನೆನೆದು ಕೊಡಗು ಜಿಲ್ಲೆಯ ಕುಶಾಲನಗರದ ವೃತ್ತ ನಿರೀಕ್ಷಕರಾಗಿ ಕರ್ತವ್ಯ ಮಾಡುತ್ತಿರುವ ಮಹೇಶ್ ದೇವರು ಅವರು ಭಾವುಕರಾಗಿ ಹಾಡು ಹೇಳುವ ಮೂಲಕ ನಮನ ಸಲ್ಲಿಸಿದ್ದಾರೆ. ಈ ಹಾಡು ಇದೀಗ ಸಾಮಾಜಿಕ ಜಾಲತಾಣದ ವೈರಲ್ ಆಗುತ್ತಿದೆ..

ಪುನೀತ್ ರಾಜ್‍ಕುಮಾರ್ ಜೊತೆ ಮಹೇಶ್ ದೇವರು
ಪುನೀತ್ ರಾಜ್‍ಕುಮಾರ್ ಜೊತೆ ಮಹೇಶ್ ದೇವರು

By

Published : Mar 19, 2022, 12:25 PM IST

ಮಡಿಕೇರಿ: ಪುನೀತ್ ರಾಜ್‍ಕುಮಾರ್ ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ರಾಜ್ಯಾದ್ಯಂತ ನಿನ್ನೆ ತೆರೆಕಂಡು ಭರ್ಜರಿಯಾಗಿ ಪ್ರದರ್ಶನಗೊಳ್ಳುತ್ತಿದೆ‌. ಅಪ್ಪು ಅವರನ್ನು 'ಜೇಮ್ಸ್' ಚಿತ್ರದಲ್ಲಿ ನೋಡಿ ಅಭಿಮಾನಿಗಳು ಭಾವುಕರಾಗುತ್ತಿರುವುದು ಸಮಾನ್ಯವಾಗಿದೆ. ವೃತ್ತ ನಿರೀಕ್ಷಕರೊಬ್ಬರು ಪುನೀತ್​ ಜೊತೆಗಿನ ಒಡನಾಟವನ್ನ ನೆನಪಿಸಿಕೊಂಡು ಭಾವುಕರಾಗಿ ಹಾಡು ಹೇಳುವ ಮೂಲಕ ನಮನ ಸಲ್ಲಿಸಿದ್ದಾರೆ.

ಅಪ್ಪು ಅಗಲಿ ನಾಲ್ಕು ತಿಂಗಳು ಕಳೆದ್ರು ಕೂಡ ಅಭಿಮಾನಿಗಳ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ. ಅವರು ಮಾಡಿರುವ ಸಮಾಜ ಸೇವೆಯನ್ನ ನೆನೆದು ಕೊಡಗು ಜಿಲ್ಲೆಯ ಕುಶಾಲನಗರದ ವೃತ್ತ ನಿರೀಕ್ಷಕರಾಗಿ ಕರ್ತವ್ಯ ಮಾಡುತ್ತಿರುವ ಮಹೇಶ್ ದೇವರು ಅವರು ಭಾವುಕರಾಗಿ ಡಾಕ್ಟರ್ ರಾಜ್ ಕುಮಾರ್ ಹಾಡಿರುವ ರೀತಿಯಲ್ಲಿಯೇ ಹಾಡನ್ನ ಹಾಡಿ ಅಚ್ಚರಿ ಮೂಡಿಸಿದ್ದಾರೆ.

ವೈರಲ್​ ಆದ ವೃತ್ತ ನಿರೀಕ್ಷಕ ಮಹೇಶ್ ದೇವರು ಹಾಡಿರುವ ಹಾಡು..

ಪುನೀತ್ ರಾಜ್‍ಕುಮಾರ್ ಬಗ್ಗೆ ಮಹೇಶ್ ಅಪಾರವಾದ ಗೌರವ ಹಾಗೂ ಅಭಿಮಾನ ಇಟ್ಟುಕೊಂಡಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರ ಕೊನೆಯ ಚಿತ್ರ 'ಜೇಮ್ಸ್' ಚಿತ್ರೀಕರಣವನ್ನ ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಾಡುವ ಸಂದರ್ಭದಲ್ಲಿ ಈ ಪೊಲೀಸ್ ಅಧಿಕಾರಿ ಪುನೀತ್ ರಾಜ್‍ಕುಮಾರ್ ಅವರೊಂದಿಗೆ ಒಂದಷ್ಟು ಸಮಯ ಕಳೆದಿದ್ದಾರೆ. ಅದು ಇಂದಿಗೂ ಅವರನ್ನು ಕಾಡುತ್ತಿದೆಯಂತೆ.

ಪುನೀತ್ ರಾಜ್‍ಕುಮಾರ್ ಜೊತೆ ವೃತ್ತ ನಿರೀಕ್ಷಕ ಮಹೇಶ್ ದೇವರು

ಪುನೀತ್ ರಾಜ್‍ಕುಮಾರ್ ಅವರ ಸಮಾಜ ಸೇವೆ ಹಾಗೂ ಅಭಿಮಾನಿಗಳು ಅವರ ಮೇಲೆ ಇಟ್ಟಿರುವ ಅಭಿಮಾನ ಕಂಡ ಪೊಲೀಸ್ ಅಧಿಕಾರಿ ಮಹೇಶ್ ದೇವರು, 'ಒಂದು ಮಾತನಾಡದೇ.. ಮೌನ ಪ್ರೀತಿ ಮಾಡಿದೆ, ಇಂದು ಮಾತನಾಡಿದೆ ಪ್ರೀತಿ ಮೌನವಾಗಿದೆ.. ನೀನೆ ಜೀವ ಜೀವನ.. ನೀನೆ ಪ್ರೇಮ ಕಾರಣ ಎಂದು ಹೇಳ ಬಂದರೆ...ದೂರ ಹೋದೆ ಏತಕೆ?, ಕಾಣದಂಥ ಲೋಕಕೆ' ಎಂಬ ಹಾಡನ್ನು ಭಾವುಕರಾಗಿ ಹಾಡಿದ್ದು, ಇದು ಸಾಮಾಜಿಕ ಜಾಲತಾಣದ ವೈರಲ್ ಅಗುತ್ತಿದೆ.

ಇದನ್ನೂ ಓದಿ:ಆರ್​ಆರ್​ಆರ್ ಪ್ರೀ - ರಿಲೀಸ್​ ಇವೆಂಟ್​ಗೆ ಕ್ಷಣಗಣನೆ: ಸಿಎಂ, ಶಿವಣ್ಣ ಸೇರಿದಂತೆ ಹಲವು ಗಣ್ಯರು ಭಾಗಿ

ABOUT THE AUTHOR

...view details