ಕೊಡಗು:ಜೆಸಿಬಿ ಯಂತ್ರದಿಂದ ಜೋಳದ ದಿಂಡಿನ ರಾಶಿ ಸ್ವಚ್ಚಗೊಳಿಸುವಾಗ ವ್ಯಕ್ತಿಯ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ಧಾಪುರದಲ್ಲಿ ನಡೆದಿದೆ.
ಜೋಳದ ದಿಂಡಿನ ರಾಶಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ; ಕೊಲೆ ಸಂಶಯ..! - ಜೆಸಿಬಿ ಯಂತ್ರದಿಂದ ಜೋಳದ ದಿಂಡಿನ ರಾಶಿ ಸ್ವಚ್ಚಗೊಳಿಸುವಾಗ ವ್ಯಕ್ತಿಯ ಮೃತದೇಹವೊಂದು ಪತ್ತೆ
ಜೋಳದ ದಿಂಡಿನ ರಾಶಿಯ ಕೆಳಗೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಗ್ರಾಮಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಜೋಳದ ದಿಂಡಿನ ರಾಶಿಯಲ್ಲಿ ವ್ಯಕ್ತಿಯ ಮೃತದೇಹ
ಪಾನಿಪೂರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಸಿದ್ಧಾಪುರ ಗ್ರಾಮದ ನಿವಾಸಿ ಮಹೇಶ್(40) ಮೃತ ವ್ಯಕ್ತಿ.
ಜೆಸಿಬಿ ಯಂತ್ರದಿಂದ ಕೆಲಸ ಮಾಡಿಸುತ್ತಿದ್ದ ವೇಳೆ, ಗ್ರಾಮದ ಶುಂಠಿ ಶುದ್ಧೀಕರಣ ಘಟಕದ ಹಿಂಭಾಗದಲ್ಲಿ ಮೃತದೇಹ ಪತ್ತೆಯಾಗಿದೆ. ಮಹೇಶ್ ದೇಹದ ಮೇಲೆ ರಕ್ತದ ಕಲೆಗಳಿದ್ದು, ಯಾರೋ ಕೊಲೆ ಮಾಡಿ ಮೃತದೇಹವನ್ನು ಬಚ್ಚಿಟ್ಟಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
TAGGED:
kodagu death news