ಕರ್ನಾಟಕ

karnataka

ETV Bharat / state

ನಾಯಿ ಮರಿಗಳನ್ನು ಮಾರಿ ಸಿಎಂ ನಿಧಿಗೆ ದೇಣಿಗೆ ಕೊಟ್ಟ ನಿವೃತ್ತ ಪೊಲೀಸ್ ಅಧಿಕಾರಿ - ನಾಯಿ ಮಾರಾಟ

ವ್ಯಕ್ತಿಯೋರ್ವ ತಮ್ಮ ಮನೆಯಲ್ಲಿದ್ದ ನಾಯಿಮರಿಗಳನ್ನು ಮಾರಿ ಅದರಿಂದ ಬಂದ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

madikeri
ಮಡಿಕೇರಿ

By

Published : Apr 8, 2020, 8:56 PM IST

ಮಡಿಕೇರಿ:ನಿವೃತ್ತ ಪೊಲೀಸ್​ ಸಿಬ್ಬಂದಿಯೊಬ್ಬರು ತಮ್ಮ ಮನೆಯಲ್ಲಿದ್ದ ಜರ್ಮನ್ ಶೆಫರ್ಡ್ ತಳಿಯ ಮೂರು ಶ್ವಾನದ ಮರಿಗಳನ್ನು ಮಾರಾಟ ಮಾಡಿ ಅದರಲ್ಲಿ ಬಂದ 25 ಸಾವಿರ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿರುವ ಘಟನೆ ನಗರದಲ್ಲಿ ನಡೆದಿದೆ.

ಮಡಿಕೇರಿಯ ನಿವಾಸಿಯಾಗಿರುವ ನಿವೃತ್ತ ಪೊಲೀಸ್ ಸಿಬ್ಬಂದಿ ಕಾವೇರಪ್ಪ 20 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಮನೆಯಲ್ಲಿರುವ ಜರ್ಮನ್​ ಶೆಫರ್ಡ್ ಶ್ವಾನ ಕೆಲವು ದಿನಗಳ ಹಿಂದೆ 13 ಮರಿಗಳನ್ನು ಹಾಕಿತ್ತು. ಅದರಲ್ಲಿ 5 ಮರಿಗಳು ಸಾವನ್ನಪ್ಪಿದ್ದವು. ಉಳಿದ 8 ಶ್ವಾನದ ಮರಿಯಲ್ಲಿ 7 ಮರಿಗಳನ್ನು ಒಂದು ಮರಿಗೆ 9 ಸಾವಿರದಂತೆ ಮಾರಾಟ ಮಾಡಲಾಗಿದ್ದು, 3 ಮರಿಗೆ ಬಂದ ಹಣವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್​ಗೆ ಹಸ್ತಾಂತರ ಮಾಡಿದ್ದಾರೆ.

ABOUT THE AUTHOR

...view details