ಕರ್ನಾಟಕ

karnataka

ETV Bharat / state

ಹಣಕಾಸಿನ ಕಲಹ: ಡ್ರ್ಯಾಗರ್​ನಿಂದ ಇರಿದು ವ್ಯಕ್ತಿಯ ಕೊಲೆ - drager

ಹಣ ನೀಡದೆ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಡ್ರ್ಯಾಗರ್​ನಿಂದ ಇರಿದು ಕೊಲೆ ಮಾಡಲಾಗಿದೆ.

By

Published : Feb 6, 2019, 12:26 PM IST

ಕೊಡಗು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಡ್ರ್ಯಾಗರ್​ನಿಂದ ಇರಿದು ಕೊಲೆ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪಲು ರಸ್ತೆಯ ಪಂಜಾರಪೇಟೆಯಲ್ಲಿ ನಡೆದಿದೆ.

ಶಫೀಕ್ ಕೊಲೆಯಾದ ವ್ಯಕ್ತಿ. ಆರೋಪಿ ದರ್ಶನ್ ತಡರಾತ್ರಿ ಶಫೀಕ್ ಮನೆಗೆ ನುಗ್ಗಿ ಡ್ರ್ಯಾಗರ್​ನಿಂದ ಇರಿದು ಕೊಲೆ ಮಾಡಿದ್ದಾನೆ. ಇವರಿಬ್ಬರ​ ನಡುವೆ ಲಕ್ಷಾಂತರ ರೂ. ಹಣಕಾಸಿನ ವ್ಯವಹಾರ ನಡೆದಿತ್ತು. ಶಫೀಕ್ ಹಣ ನೀಡದೆ ತಲೆಮರೆಸಿಕೊಂಡು ಓಡಾಡುತ್ತಿದ್ದನಂತೆ. ಹೀಗಾಗಿ ಕೊಲೆ ನಡೆದಿದೆ ಎನ್ನಲಾಗಿದೆ.

ಆರೋಪಿ ದರ್ಶನ್​ನನ್ನು ವಿರಾಜಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details