ವಿರಾಜಪೇಟೆ(ಕೊಡಗು): ಕಳೆದ ವರ್ಷ ಸಂಭವಿಸಿದ ಭೂ ಕುಸಿತದಲ್ಲಿ ತನ್ನ ಇಡೀ ಕುಟುಂಬವನ್ನೇ ಕಳೆದುಕೊಂಡ ತೋರಾ ಗ್ರಾಮದ ಪ್ರಭು ಎಂಬವರು ವಿಧವೆಯನ್ನು ವಿವಾಹವಾಗಿ ಹೊಸ ದಾಂಪತ್ಯ ಜೀವನ ಪ್ರಾರಂಭಿಸಿದ್ದಾರೆ.
ಲಾಕ್ಡೌನ್ ನಡುವೆ 'ಪಾಸಿಟಿವ್' ನ್ಯೂಸ್.. ವಿಧವೆಗೆ ಬಾಳು ಕೊಟ್ಟ ಇಡೀ ಕುಟುಂಬ ಕಳೆದುಕೊಂಡಿದ್ದ ವ್ಯಕ್ತಿ - landslide
ಕಳೆದ ಆಗಸ್ಟ್‌ನಲ್ಲಿ ವಿರಾಜಪೇಟೆಯ ತೋರಾ ಗ್ರಾಮದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಪ್ರಭು ತನ್ನಿಬ್ಬರು ಮಕ್ಕಳು, ಹೆಂಡತಿ ಹಾಗೂ ತಾಯಿಯನ್ನು ಕಳೆದುಕೊಂಡಿದ್ದರು.
ವಿಧವೆ ವರಿಸಿ ನೂತನ ಜೀವನಕ್ಕೆ ಪದಾರ್ಪಣೆ
ಇಬ್ಬರು ಹೆಣ್ಣು ಮಕ್ಕಳ ತಾಯಿಯಾದ ಕೇರಳ ಮೂಲದ ವಿಧವೆಯನ್ನು ಬ್ರಾಹ್ಮಣ ಸಂಪ್ರದಾಯದಂತೆ ಅವರು ವರಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ವಿರಾಜಪೇಟೆಯ ತೋರಾ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಪ್ರಭು ತನ್ನಿಬ್ಬರು ಮಕ್ಕಳು, ಹೆಂಡತಿ ಹಾಗೂ ತಾಯಿಯನ್ನು ಕಳೆದುಕೊಂಡಿದ್ದರು.
ಹಲವು ದಿನಗಳ ಶೋಧದ ನಂತರ ಹೆಂಡತಿಯ ಮೃತದೇಹ ಪತ್ತೆಯಾಗಿದ್ದು ಬಿಟ್ಟರೆ ಉಳಿದವರ ಮೃತ ದೇಹಗಳು ಮಣ್ಣಲ್ಲೇ ಮಣ್ಣಾಗಿದ್ದವು.