ಸೋಮವಾರಪೇಟೆ (ಕೊಡಗು): ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಜಗಳದಲ್ಲಿ ವ್ಯಕ್ತಿವೋರ್ವ ತನ್ನ ಸೊಸೆ ಮೇಲೆಯೇ ಗುಂಡು ಹಾರಿಸಿರುವ ಘಟನೆ ಸೋಮವಾರಪೇಟೆ ತಾಲೂಕಿನಲ್ಲಿ ನಡೆದಿದೆ.
ಕೊಡಗಿನಲ್ಲಿ ಸದ್ದು ಮಾಡಿದ ಶೂಟೌಟ್: ಸೊಸೆ ಮೇಲೆಯೇ ಗುಂಡು ಹಾರಿಸಿದ ಮಾವ! - ಕೊಡಗು ಶೂಟೌಟ್,
ಆಸ್ತಿ ಕಲಹ ವಿಕೋಪ ತಿರುಗಿ ಮಾವನೋರ್ವ ತನ್ನ ಸೊಸೆ ಮೇಲೆ ಗುಂಡು ಹಾರಿಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡಿರುವ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
![ಕೊಡಗಿನಲ್ಲಿ ಸದ್ದು ಮಾಡಿದ ಶೂಟೌಟ್: ಸೊಸೆ ಮೇಲೆಯೇ ಗುಂಡು ಹಾರಿಸಿದ ಮಾವ! man fired on his sister in law, man fired on his sister in law at Kodagu, Kodagu Shootout, Kodagu Shootout news, ಸೊಸೆ ಮೇಲೆ ಗುಂಡಿನ ದಾಳಿ ಮಾಡಿದ ಮಾವ, ಕೊಡಗಿನಲ್ಲಿ ಸೊಸೆ ಮೇಲೆ ಗುಂಡಿನ ದಾಳಿ ಮಾಡಿದ ಮಾವ, ಕೊಡಗು ಶೂಟೌಟ್, ಕೊಡಗು ಶೂಟೌಟ್ ಸುದ್ದಿ,](https://etvbharatimages.akamaized.net/etvbharat/prod-images/768-512-9439465-1010-9439465-1604566004954.jpg)
ಸೊಸೆ ಮೇಲೆಯೇ ಗುಂಡು ಹಾರಿಸಿದ ಮಾವ
ಸೊಸೆ ಮೇಲೆಯೇ ಗುಂಡು ಹಾರಿಸಿದ ಮಾವ
ತಾಲೂಕಿನ ಬೆಟ್ಟದಕೊಪ್ಪದಲ್ಲಿ ಆಸ್ತಿ ಸಂಬಂಧ ಮಾವ ಮತ್ತು ಸೊಸೆ ನಡುವೆ ಜಗಳವಾಗಿದೆ. ಈ ವೇಳೆ ಮಾವ ಅಯ್ಯಪ್ಪ ತನ್ನ ಸೊಸೆ ತೀರ್ಥ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಸೊಸೆ ತೀರ್ಥ(36) ಅವರ ಎಡಗೈ ಹಾಗೂ ಎದೆ ಭಾಗಕ್ಕೆ ಗುಂಡೇಟು ಬಿದ್ದಿದೆ. ಗುಂಡೇಟಿನಿಂದ ಗಾಯಗೊಂಡಿರುವ ತೀರ್ಥರನ್ನು ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.