ಕೊಡಗು: ಸ್ನಾನ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಪ್ರಜ್ಞೆ ತಪ್ಪಿ ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲೂಕಿನ ಉಂಜಿಗನಹಳ್ಳಿಯಲ್ಲಿ ನಡೆದಿದೆ. ರೋಷನ್ (41) ಮೃತ ದುರ್ದೈವಿಯಾಗಿದ್ದಾರೆ.
ಸ್ನಾನ ಮಾಡುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ವ್ಯಕ್ತಿ ಸಾವು; ಕೊರೊನಾ ಭಯದಿಂದ ಸಹಾಯಕ್ಕೆ ಬರದ ಜನ - latest kodagu death news
ಸೋಮವಾರಪೇಟೆ ತಾಲ್ಲೂಕಿನ ಉಂಜಿಗನಹಳ್ಳಿ ಗ್ರಾಮದಲ್ಲಿ ಸ್ನಾನ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬ ಪ್ರಜ್ಞೆತಪ್ಪಿ ಮೃತಪಟ್ಟ ಘಟನೆ ನಡೆದಿದೆ.
ಸ್ನಾನ ಮಾಡುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ಪ್ರಾಣ ಕಳೆದುಕೊಂಡ ವ್ಯಕ್ತಿ
ಇವರು ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಸಹಾಯ ಮಾಡುವಂತೆ ಇವರ ತಾಯಿ ಕೂಗಿಕೊಂಡರೂ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರಾರೂ ಧಾವಿಸಿ ಬಂದಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ರೋಷನ್ ಮಾರ್ಚ್ 20 ರಂದು ಮಂಗಳೂರಿನಿಂದ ಊರಿಗೆ ಬಂದಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.