ಮಡಿಕೇರಿ:ಕೊರೊನಾ ಮಹಾಮಾರಿಯನ್ನು ಕಟ್ಟಿಹಾಕಲು ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ. ಆದ್ರೆ, ಇಲ್ಲೊಬ್ಬ ವಿದೇಶಿ ಪ್ರಜೆ ಕೊಡಗಿಗೆ ಎಂಟ್ರಿ ಕೊಟ್ಟು ಜನರಲ್ಲಿ ಆತಂಕ ಮೂಡುವಂತೆ ಮಾಡಿದ್ದ.
ಅಡ್ಡಾದಿಡ್ಡಿ ಸುತ್ತಾಡುತ್ತಿದ್ದ ವಿದೇಶಿ ಪ್ರಜೆಗೆ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ - foriegner roaming in madikeri
ಮಡಿಕೇರಿಯಲ್ಲಿ ಓಡಾಡುತ್ತಾ ಜನರಲ್ಲಿ ಕೊರೊನಾ ಆತಂಕ ಹೆಚ್ಚಿಸಿದ್ದ ವಿದೇಶಿ ಪ್ರಜೆಯನ್ನು ವಶಕ್ಕೆ ಪಡೆದು ಕ್ವಾರಂಟೈನ್ ಮಾಡಲಾಗಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಒಣಚಲು ಬಸ್ ನಿಲ್ದಾಣದಲ್ಲಿ ವಿದೇಶಿ ಪ್ರಜೆಯೊಬ್ಬ ಕುಳಿತಿದ್ದ. ಇದನ್ನು ನೋಡಿ ತಕ್ಷಣವೇ ಎಚ್ಚೆತ್ತುಕೊಂಡ ಸ್ಥಳೀಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಬ್ರೆಜಿಲ್ ಪ್ರಜೆಯನ್ನು ವಶಕ್ಕೆ ಪಡೆದು ಮಡಿಕೇರಿಯ ಕೊವಿಡ್ ಆಸ್ಪತ್ರೆಗೆ ಕರೆತಂದಿದ್ದಾರೆ. ನಂತರ ಆತನಿಗೆ ಕೋವಿಡ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಾರ್ಡ್‍ಗೆ ದಾಖಲಿಸಿಕೊಂಡಿದ್ದಾರೆ. ವ್ಯಕ್ತಿಯು ತಾನು ಬ್ರೆಜಿಲ್ ದೇಶದವನಾಗಿದ್ದು, ವರ್ಷದ ಹಿಂದೆಯೇ ಭಾರತಕ್ಕೆ ಬಂದಿದ್ದೇನೆ ಅಂತಾನೆ. ಆದರೆ ಇವನ ಬಳಿ ಬ್ರೆಜಿಲ್ ಪ್ರಜೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ. ಇನ್ನು ತಾನು ಸದ್ಯ ಮೈಸೂರು ಜಿಲ್ಲೆಯ ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಕ್ಯಾಂಪ್ ನಲ್ಲಿದ್ದು, ಅಲ್ಲಿಂದ ಬಂದಿದ್ದೇನೆ ಎಂದು ಮಾಹಿತಿ ನೀಡಿದ್ದಾನೆ. ಆದ್ರೆ ಈ ವ್ಯಕ್ತಿಯು ಮೈಸೂರು ಜಿಲ್ಲೆಯಿಂದ ಎರಡು ಗಡಿಗಳನ್ನು ದಾಟಿ ಕೊಡಗು ಜಿಲ್ಲೆಗೆ ಬಂದಿದ್ದಾದರೂ ಹೇಗೆ ಎನ್ನೋ ಪ್ರಶ್ನೆ ಉದ್ಭವಿಸಿದೆ.