ಸೋಮವಾರಪೇಟೆ: ಶನಿವಾರಸಂತೆ ಸಮೀಪದ ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ಸಂಪಿಗೆದಾಳು ಗ್ರಾಮದ ರೈತ ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಲಬಾಧೆ: ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ - ಸೋಮವಾರಪೇಟೆ ರೈತ ಆತ್ಮಹತ್ಯೆ ಸುದ್ದಿ
ತನ್ನ ಗ್ರಾಮದಲ್ಲಿ ಮದುವೆ ಹಸೆ ಶಾಸ್ತ್ರಕ್ಕೆ ತೆರಳಿ ಊಟ ಮುಗಿಸಿ ಮನೆಗೆ ಬಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರೈತ ಆತ್ಮಹತ್ಯೆ
ಸಂಪಿಗೆದಾಳು ಗ್ರಾಮದ ಆಶಾ ಕಾರ್ಯಕರ್ತೆ ನೇತ್ರಾ ಎಂಬುವರ ಪತಿ ನಾಗೇಶ್ (48) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ತನ್ನ ಗ್ರಾಮದಲ್ಲಿ ಮದುವೆ ಹಸೆ ಶಾಸ್ತ್ರಕ್ಕೆ ತೆರಳಿ ಊಟ ಮುಗಿಸಿ ಮನೆಗೆ ಬಂದು ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬ್ಯಾಂಕ್ನಲ್ಲಿ ಸಾಲ ಮಾಡಿದ್ದ ಎನ್ನಲಾಗಿದೆ. ಅದನ್ನು ತೀರಿಸಲಾಗದೆ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.