ಕೊಡಗು:ಕೊರೊನಾ ಭೀತಿಯ ನಡುವೆ ಕೊಡಗಿನಲ್ಲಿ ಹುಲಿ ದಾಳಿ ಪ್ರಕರಣಗಳು ಮಿತಿ ಮೀರಿದ್ದು, ಹುಲಿ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ತೂಚಮಕೇರಿ ಗ್ರಾಮದಲ್ಲಿ ನಡೆದಿದೆ.
ಕೊಡಗಿನಲ್ಲಿ ಹುಲಿ ದಾಳಿಗೆ ಮತ್ತೊಂದು ಹಸು ಬಲಿ - A cow dies from tiger attack
ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಇಂದು ಮುಂಜಾನೆ ಹುಲಿ ದಾಳಿ ಮಾಡಿ ಕೊಂದಿರುವ ಘಟನೆ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.
ಹುಲಿ ದಾಳಿ ಮತ್ತೊಂದು ಹಸು ಬಲಿ
ತೂಚಮಕೇರಿ ಗ್ರಾಮದ ನಿವಾಸಿ ಸಿ.ಮಂದಣ್ಣ ಎಂಬುವರಿಗೆ ಸೇರಿದ ಹಸು ಬಲಿಯಾಗಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಇಂದು ಮುಂಜಾನೆ ಹುಲಿ ಎರಗಿ ಕೊಂದಿದೆ.
ಕೆಲವು ದಿನಗಳಿಂದ ನೆಮ್ಮದಿಯಿಂದ ಇದ್ದ ಸ್ಥಳೀಯರಲ್ಲಿ ಇದೀಗ ಹುಲಿ ದಾಳಿ ಪ್ರಕರಣ ಆತಂಕ ಮೂಡಿಸಿದೆ. ಒಂದು ವಾರದಿಂದ ದಕ್ಷಿಣ ಕೊಡಗಿನ ವ್ಯಾಪ್ತಿಯಲ್ಲಿ ಹಲವು ಜಾನುವಾರುಗಳು ಹುಲಿ ಬಾಯಿಗೆ ಆಹಾರವಾಗಿವೆ. ಇನ್ನು ಹುಲಿ ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.