ಕೊಡಗು :ಜಿಲ್ಲೆಯಲ್ಲಿ ಇದ್ದೊಂದು ಪಾಸಿಟಿವ್ ಕೊರೊನಾ ಪ್ರಕರಣ ಇಂದಿಗೆ ಮುಕ್ತವಾಗಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದರು. ಕೊರೊನಾ ಪಾಸಿಟಿವ್ ಇದ್ದ ವ್ಯಕ್ತಿ ಸಂಪೂರ್ಣ ಗುಣವಾಗಿದ್ದಾರೆ. ಅವರು ಇಂದು ಕೊಡಗು ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಪಾಸಿಟಿವ್ ವರದಿ ಬಂದ ಬಳಿಕ ಚಿಕಿತ್ಸೆ ನೀಡಲಾಗುತಿತ್ತು. ಆ ಬಳಿಕ ಮೂರು ಬಾರಿ ಗಂಟಲ ದ್ರವ ಪರೀಕ್ಷೆ ಮಾಡಲಾಗಿದೆ. ಮೂರು ಬಾರಿಯೂ ನೆಗೆಟಿವ್ ವರದಿ ಬಂದಿದೆ. ಹೀಗಾಗಿ ಇಂದು ಡಿಸ್ಚಾರ್ಜ್ ಮಾಡಲಾಗುವುದು ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಕೊಡಗಿನಲ್ಲಿದ್ದ ಒಬ್ಬನೇ ಕೊರೊನಾ ಪೀಡಿತ ಸಂಪೂರ್ಣ ಗುಣಮುಖ.. ಡಿಸಿ ಅನೀಸ್ ಕೆ.ಜಾಯ್ - ಕೊಡಗು ಡಿಸಿ ಅನೀಸ್ ಕೆ.ಜಾಯ್
ಬಿಡುಗಡೆ ಬಳಿಕವೂ ಅವರನ್ನು 14 ದಿನಗಳ ಹೋಂ ಕ್ವಾರಂಟೈನ್ ಮಾಡಲಾಗ್ತಿದೆ. ಆ ಸಮಯದಲ್ಲೂ ರೋಗ ಲಕ್ಷಣ ಕಂಡು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೋಂ ಕ್ವಾರಂಟೈನ್ ಮಾಡಲಾಗುವುದು. ಪಾಸಿಟಿವ್ ವ್ಯಕ್ತಿ ಇದ್ದ ಗ್ರಾಮದ ಕಂಟೈನ್ಮೆಂಟ್ ನಿಯಮ ತೆಗೆಯಲಾಗುತ್ತಂತೆ.
ಬಿಡುಗಡೆ ಬಳಿಕವೂ ಅವರನ್ನು 14 ದಿನಗಳ ಹೋಂ ಕ್ವಾರಂಟೈನ್ ಮಾಡಲಾಗುವುದು. ಆ ಸಮಯದಲ್ಲೂ ರೋಗ ಲಕ್ಷಣ ಕಂಡು ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಹೋಂ ಕ್ವಾರಂಟೈನ್ ಮಾಡಲಾಗುವುದು. ಪಾಸಿಟಿವ್ ವ್ಯಕ್ತಿ ಇದ್ದ ಗ್ರಾಮದ ಕಂಟೈನ್ಮೆಂಟ್ ನಿಯಮವನ್ನು ತೆಗೆಯಲಾಗುವುದು. ಗ್ರಾಮ ಮತ್ತು ಅದರ ಸುತ್ತಲಿನ 5 ಕಿ.ಮೀ ಬಫರ್‌ಜೋನ್ ಮಾಡಲಾಗಿತ್ತು. ವಿದೇಶದಿಂದ ಬಂದ 386 ಜನ ಹೋಂ ಕ್ವಾರಂಟೈನ್ ಪೂರೈಸಿದ್ದಾರೆ.
ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬಂದಿರುವವರು ಹೋಂ ಕ್ವಾರಂಟೈನಲ್ಲಿದ್ದಾರೆ. 1538 ಜನರಿಗೆ ಕ್ವಾರಂಟೈನ್ ಮಾಡಲಾಗಿದೆ. ತಬ್ಲಿಘಿ ಜಮಾಅತ್ ಸದಸ್ಯರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರ ವರದಿಯೂ ನೆಗೆಟಿವ್ ಬಂದಿದೆ. ಆದರೆ, 14 ದಿನ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದರು.