ಕೊಡಗು:ಎಸ್ಟೇಟ್ವೊಂದರಲ್ಲಿ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿದಿರುವ ಘಟನೆ ಮಡಿಕೇರಿ ತಾಲೂಕಿನ ಹೆಗ್ಗೇರಿ ಎಸ್ಟೇಟ್ ಬಳಿ ನಡೆದಿದೆ.
ಕೊಡಗಿನ ಹೆಗ್ಗೇರಿ ಎಸ್ಟೇಟ್‌ನಲ್ಲಿ 20 ಕೆಜಿ ತೂಕದ ಬೃಹತ್ ಗಾತ್ರದ ಹೆಬ್ಬಾವು ಸೆರೆ! - Kodagu news
ಹೆಬ್ಬಾವು ಸುಮಾರು 20 ಕೆಜಿ ತೂಗುತ್ತಿದ್ದು, ಕಾಡು ಕುರಿಮರಿಯೊಂದನ್ನು ನುಂಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹೆಬ್ಬಾವು
ಈ ಹೆಬ್ಬಾವು ಸುಮಾರು 12 ಅಡಿ ಉದ್ದವಿದೆ. ಎಸ್ಟೇಟ್ ಮಾಲೀಕರು ತಕ್ಷಣವೇ ಉರಗ ತಜ್ಞರಾದ ಮೂರ್ನಾಡುವಿನ ಸ್ನೇಕ್ ಪ್ರಜ್ವಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪ್ರಜ್ವಲ್, ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಾಧಿಕಾರಿ ದೇವಯ್ಯ ಮತ್ತು ತಂಡಕ್ಕೆ ಹಸ್ತಾಂತರಿಸಿದ್ದಾರೆ.
ಹೆಬ್ಬಾವು ಸುಮಾರು 20 ಕೆಜಿ ತೂಗುತ್ತಿದ್ದು, ಕಾಡು ಕುರಿಮರಿಯೊಂದನ್ನು ನುಂಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.