ಕೊಡಗು :ಜಿಲ್ಲೆಯಲ್ಲಿ 356 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ 266 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 84 ಪ್ರಕರಣ ಮಾತ್ರ ಸಕ್ರಿಯವಾಗಿವೆ. ಈ ಮೂಲಕ ಶೇ.75ರಷ್ಟು ಗುಣಮುಖರಾಗಿದ್ದಾರೆ. ಆದರೆ, 6 ಮಂದಿ ಮಾತ್ರ ವೈರಸ್ನಿಂದ ಮೃತಪಟ್ಟಿದ್ದಾರೆ.
ಕೊಡಗಿನಲ್ಲಿ ಶೇ.75ರಷ್ಟು ಸೋಂಕಿತರು ಗುಣಮುಖ.. ಆತಂಕದ ಜತೆ ಆಶಾದಾಯಕ ಬೆಳವಣಿಗೆ! - Karnataka coronavirus update
ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಕಡ್ಡಾಯವಾಗಿ ಧರಿಸುತ್ತಿದ್ದಾರೆ. ಜೊತೆಗೆ ಅನಗತ್ಯ ಜನ ಹೊರಗೆ ಬರುವುದನ್ನು ಕಡಿಮೆ ಮಾಡಿ ಮಾಡಿದ್ದಾರೆ. ಅಷ್ಟೇ ಅಲ್ಲ, ರೋಗದ ಲಕ್ಷಣಗಳು ಕಾಣಿಸಿದ ಕೂಡಲೇ ಪರೀಕ್ಷೆಗೊಳಗಾಗುತ್ತಿದ್ದಾರೆ..
ಕೊಡಗು ಸಹಜವಾಗಿಯೇ ಹೆಚ್ಚು ಮಳೆ ಸುರಿಯುವ ಪ್ರದೇಶ. ಹೀಗಾಗಿ ಶೀತದ ವಾತಾವರಣವಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಶೀತದ ವಾತಾವರಣದಲ್ಲಿ ಕೊರೊನಾ ಹರಡುವುದು ಮತ್ತು ಅಪಾಯ ಜಾಸ್ತಿ. ಆದರೂ ಕೊಡಗಿನಲ್ಲಿ ಕೊರೊನಾ ಹರಡುತ್ತಿರುವುದು ಕಡಿಮೆ. ಜನರು ಕೂಡ ಸೋಂಕು ಹರಡದಂತೆ ಹೆಚ್ಚು ಮುನ್ನೆಚ್ಚರಿಕೆ ವಹಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಕಡ್ಡಾಯವಾಗಿ ಧರಿಸುತ್ತಿದ್ದಾರೆ. ಜೊತೆಗೆ ಅನಗತ್ಯ ಜನ ಹೊರಗೆ ಬರುವುದನ್ನು ಕಡಿಮೆ ಮಾಡಿ ಮಾಡಿದ್ದಾರೆ. ಅಷ್ಟೇ ಅಲ್ಲ, ರೋಗದ ಲಕ್ಷಣಗಳು ಕಾಣಿಸಿದ ಕೂಡಲೇ ಕೋವಿಡ್-19 ಪರೀಕ್ಷೆಗೊಳಗಾಗಿ ರೋಗ ನಿಯಂತ್ರಣ ಮಾಡುವುದರಲ್ಲಿ ಜಾಗರೂಕರಾಗಿದ್ದಾರೆ. ಹೀಗಾಗಿಯೇ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಸೋಂಕು ಹರಡುವ ಸಂಖ್ಯೆಯೂ ಕಡಿಮೆಯಾಗಿರುವುದು ಮತ್ತೊಂದು ನಿಜಕ್ಕೂ ಸಂತಸದ ಸಂಗತಿ.