ಕೊಡಗು:2015ರ ಟಿಪ್ಪು ಜಯಂತಿ ವೇಳೆ ನಡೆದಿದ್ದ ಕರಾಳ ಘಟನೆಗೆ ಇಂದು 6 ವರ್ಷ ತುಂಬಿದೆ. ಮಡಿಕೇರಿಯಲ್ಲಿ ಘಟನೆಯಲ್ಲಿ ಮೃತಪಟ್ಟಿದ್ದ ಕುಟ್ಟಪ್ಪ ಅವರ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದೆ.
ಕೊಡಗು ಟಿಪ್ಪು ಜಯಂತಿ ಗಲಭೆಗೆ 6 ವರ್ಷ: ಜಿಲ್ಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ - ಕೊಡಗು ಟಿಪ್ಪು ಜಯಂತಿ ಗಲಭೆ ಸುದ್ದಿ
ಇಂದು ಮಡಿಕೇರಿಯಲ್ಲಿ 2015ರ ಟಿಪ್ಪು ಜಯಂತಿ ವೇಳೆ ಮೃತಪಟ್ಟಿದ್ದ ಕುಟ್ಟಪ್ಪ ಅವರ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.
![ಕೊಡಗು ಟಿಪ್ಪು ಜಯಂತಿ ಗಲಭೆಗೆ 6 ವರ್ಷ: ಜಿಲ್ಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ Kodagu Tipu Jayanthi riots, Kodagu Tipu Jayanthi riots for 6 years, Kodagu Tipu Jayanthi riots news, ಕೊಡಗು ಟಿಪ್ಪು ಜಯಂತಿ ಗಲಭೆ, ಕೊಡಗು ಟಿಪ್ಪು ಜಯಂತಿ ಗಲಭೆಗೆ 6 ವರ್ಷ, ಕೊಡಗು ಟಿಪ್ಪು ಜಯಂತಿ ಗಲಭೆ ಸುದ್ದಿ,](https://etvbharatimages.akamaized.net/etvbharat/prod-images/768-512-13590484-857-13590484-1636508556807.jpg)
ಇಂದು ಮಡಿಕೇರಿಯಲ್ಲಿ ನಡೆಯಲಿರುವ ಕುಟ್ಟಪ್ಪ ಸ್ಮರಣೆ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೆಯಾದ್ಯಂತ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ. ಅದಕ್ಕಾಗಿ ಮಡಿಕೇರಿಯ ಪ್ರಮುಖ ರಸ್ತೆಯಲ್ಲಿ ಪೊಲೀಸ್ ಪರೇಡ್ ನಡೆಸಲಾಯಿತು. RAF, DARF ತುಕಡಿಗಳು ರೂಟ್ ಮಾರ್ಚ್ ನಡೆಸಿದವು. 300ಕ್ಕೂ ಹೆಚ್ಚು ಪೊಲೀಸರು ರೂಟ್ ಮಾರ್ಚ್ನಲ್ಲಿ ಭಾಗಿಯಾಗಿದ್ದರು.
2015ರಲ್ಲಿ ಏನಾಗಿತ್ತು?: 2015ರಲ್ಲಿ ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಆಚರಣೆ ವೇಳೆ ಗಲಭೆ ನಡೆದು ಪ್ರಾಣಹಾನಿ ಸಂಭವಿಸಿತ್ತು. ಹಿಂದೂ ಪರ ಸಂಘಟನೆಯ ವಿರೋಧದ ನಡುವೆ ಸರ್ಕಾರದ ವತಿಯಿಂದ ನಡೆದ ಟಿಪ್ಪು ಆಚರಣೆ ವೇಳೆ ಹಿಂದೂಪರ ಸಂಘಟನೆಯ ಸದಸ್ಯ ಕುಟ್ಟಪ್ಪ ಮತ್ತು ಮುಸ್ಲಿಂ ಸಂಘಟನೆಯ ಸದಸ್ಯ ಶಾಹುಲ್ ಹಮೀದ್ ಅವರು ಹತ್ಯೆಗೀಡಾಗಿದ್ದರು.