ಕೊಡಗು: ಕೊಡಗಿನಲ್ಲಿ ಹೊಸದಾಗಿ ಮತ್ತೆ 4 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 40 ಕ್ಕೇರಿದೆ.
ಕೊಡಗಿನಲ್ಲಿ ಸೋಂಕಿತ ಪ್ರಕರಣಗಳ ಜಿಗಿತ: ಏರುತ್ತಿವೆ ಕೊರೊನಾ ನಿರ್ಬಂಧಿತ ಪ್ರದೇಶಗಳ ಸಂಖ್ಯೆ - ಕೊಡಗು ಜಿಲ್ಲೆಯಲ್ಲಿ ಹೊಸ ಕೊರೊನಾ ಪ್ರಕರಣಗಳು ಪತ್ತೆ ಸುದ್ದಿ
ಕೊಡಗಿನಲ್ಲಿಯೂ ಕೂಡ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಮತ್ತೆ 4 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 40 ತಲುಪಿದ್ದು, ಕಂಟೈನ್ಮೆಂಟ್ ವಲಯಗಳ ಸಂಖ್ಯೆ 19ಕ್ಕೇರಿದೆ.
19 ಕ್ಕೆ ಏರಿದ ಕಂಟೈನ್ಮೆಂಟ್ ಪ್ರದೇಶಗಳು
ಬೆಂಗಳೂರಿನಿಂದ ಬಂದಿದ್ದ 33 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೂರ್ನಾಡು ಗ್ರಾಮದ ಸುಭಾಷ್ ನಗರದ 35 ವರ್ಷದ ಆರೋಗ್ಯ ಕಾರ್ಯಕರ್ತ ಹಾಗೂ ಸೋಮವಾರಪೇಟೆ ತಾಲೂಕಿನ ಶಿರಂಗಾಲದ ಸೋಂಕಿತನಿಂದ 14 ವರ್ಷದ ಬಾಲಕನಿಗೂ ಕೊರೊನಾ ವಕ್ಕರಿಸಿದೆ.
ಕುಶಾಲನಗರದ ಸೋಂಕಿತನ ಸಂಪರ್ಕ ಹೊಂದಿದ್ದ 8 ವರ್ಷದ ಬಾಲಕನಿಗೆ ಸೋಂಕು ತಗುಲಿದೆ. ಹೀಗಾಗಿ ಜಿಲ್ಲೆಯಲ್ಲಿ ಒಟ್ಟು ನಿರ್ಬಂಧಿತ ವಲಯಗಳ ಸಂಖ್ಯೆ 19ಕ್ಕೇರಿದೆ.