ಕರ್ನಾಟಕ

karnataka

ETV Bharat / state

ಬ್ರಿಜೇಶ್, ಪ್ರಿಯಾ ಕೃಷ್ಣ ಸಹಭಾಗಿತ್ವದಲ್ಲಿ ಕೊಡಗಿಗೆ ಬಂತು ಆಕ್ಸಿಜನ್ ಸಹಿತ 30 ಬೆಡ್ ಇರುವ ಸಂಚಾರಿ ಬಸ್.. - ಮಾಜಿ ಸಚಿವ ಕೃಷ್ಟಪ್ಪ, ಶಾಸಕ ಪ್ರೀಯ ಕೃಷ್ಣಪ್ಪ

ಸ್ಲೀಪರ್ ಕೋಚ್ ಬಸ್‌ನ ಖರೀದಿ ಮಾಡಿ ಅದರಲ್ಲಿ ಆಕ್ಸಿಜನ್ ಆಳವಡಿಸಿ, ಕೋವಿಡ್ ರೋಗಿಗಳಿಗೆ ಸೇವೆ ಮಾಡಲು ಆಕ್ಸಿಜನ್ ಸಹಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಂಚಾರ ಮಾಡಲಿದ್ದು, ಒಟ್ಟಿಗೆ 30 ಜನರಿಗೆ ಚಿಕಿತ್ಸೆ ಕೊಡಬಹುದಾಗಿದೆ..

30-bed with oxygen bus start in kodagu district
ಆಕ್ಸಿಜನ್ ಸಹಿತ 30 ಬೆಡ್ ಇರುವ ಸಂಚಾರಿ ಬಸ್

By

Published : Jun 5, 2021, 10:54 PM IST

ಕೊಡಗು :ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿವೆ. ಸಾವು-ನೋವುಗಳನ್ನು ತಡೆಯಲು ಜಿಲ್ಲಾಡಳಿತ ಪ್ರಯತ್ನ ಪಡುತ್ತಿದೆ.

ಈಗ ಜನರಿಗೆ ಸುಲಭವಾಗಿ ಆಕ್ಸಿಜನ್ ದೊರೆಯುವಂತೆ ಮಾಡಲು ಕೋವಿಡ್ ರೋಗಿಗಳಿಗೆ 30 ಆಕ್ಸಿಜನ್ ಬೆಡ್ ಇರುವ ಮೊಬೈಲ್‌ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಕ್ಸಿಜನ್ ಕೋವಿಡ್ ಬಸ್ ವ್ಯವಸ್ಥೆ ಮಾಡಲಾಗಿದೆ.

ಆಕ್ಸಿಜನ್ ಸಹಿತ 30 ಬೆಡ್ ಇರುವ ಸಂಚಾರಿ ಬಸ್

ಓದಿ: ಮಿಷನ್ 2023: ಒಂದಾದ ಸತೀಶ್​ - ಪಟ್ಟಣ್, ಮುನಿಸು ಮರೆತ ಅಂಜಲಿ - ಹೆಬ್ಬಾಳ್ಕರ್!

ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ, ಮಾಜಿ ಸಚಿವ ಕೃಷ್ಟಪ್ಪ, ಶಾಸಕ ಪ್ರಿಯ ಕೃಷ್ಣ ಸಹಭಾಗಿತ್ವದಲ್ಲಿ ಜಿಲ್ಲೆಗೆ ಆಕ್ಸಿಜನ್ ಸಹಿತ ಬಸ್ ಕೊಡಲಾಗಿದ್ದು, ಇಂದು ಜಿಲಾಧಿಕಾರಿಗೆ ಹಸ್ತಾಂತರ ಮಾಡಲಾಯಿತು.

ಸ್ಲೀಪರ್ ಕೋಚ್ ಬಸ್‌ನ ಖರೀದಿ ಮಾಡಿ ಅದರಲ್ಲಿ ಆಕ್ಸಿಜನ್ ಆಳವಡಿಸಿ, ಕೋವಿಡ್ ರೋಗಿಗಳಿಗೆ ಸೇವೆ ಮಾಡಲು ಆಕ್ಸಿಜನ್ ಸಹಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಂಚಾರ ಮಾಡಲಿದ್ದು, ಒಟ್ಟಿಗೆ 30 ಜನರಿಗೆ ಚಿಕಿತ್ಸೆ ಕೊಡಬಹುದಾಗಿದೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ, ಜನರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಆಕ್ಸಿಜನ್ ಬಸ್ ವ್ಯವಸ್ಥೆ ಮಾಡಲಾಗಿದೆ. ಈಗ ಆಕ್ಸಿಜನ್ ವ್ಯವಸ್ಥೆ ಇರುವ ಸಂಚಾರಿ ಬಸ್ ಜಿಲ್ಲೆಯಲ್ಲಿರುವುದು ಕೋವಿಡ್ ರೋಗಿಗಳ ಆತಂಕ ಕಡಿಮೆಯಾಗಿದೆ.

ABOUT THE AUTHOR

...view details