ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ: ನವೋದಯ ವಸತಿ ಶಾಲೆಯ 21 ಮಕ್ಕಳಲ್ಲಿ ಕೋವಿಡ್​​ ದೃಢ - ಮಡಿಕೇರಿ ಮೆಡಿಕಲ್ ಕಾಲೇಜ್​

ವಸತಿ ಶಾಲೆಯಲ್ಲಿರುವ ಕೆಲವು ಮಕ್ಕಳಲ್ಲಿ ಕೆಮ್ಮು- ಜ್ವರ ಕಾಣಿಸಿಕೊಂಡ ಹಿನ್ನೆಲೆ ಉಳಿದ ವಿದ್ಯಾರ್ಥಿಗಳು ಅಂತರ ಕಾಪಾಡಿಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆ.

21-students-tested-positive-in-kodagu
ವಸತಿ ಶಾಲೆ

By

Published : Oct 26, 2021, 9:33 PM IST

ಕೊಡಗು: ಜಿಲ್ಲೆಯ ಗಾಳಿಬೀಡು ಸಮೀಪದ ನವೋದಯ ವಸತಿ ಶಾಲೆಯಲ್ಲಿ 21 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್​ ದೃಢಪಟ್ಟಿದೆ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ 21 ಮಕ್ಕಳನ್ನು ಮಡಿಕೇರಿ ಮೆಡಿಕಲ್ ಕಾಲೇಜ್​ಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿದ್ದ ಹಿನ್ನೆಲೆ 170 ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿತ್ತು. ಶಾಲಾ ಸಿಬ್ಬಂದಿ ಮತ್ತು ಉಳಿದ ಮಕ್ಕಳಿಗೆ ನಾಳೆ ಟೆಸ್ಟ್‌ ಮಾಡಿಸಲಾಗುತ್ತದೆ ಎಂಬುದು ತಿಳಿದು ಬಂದಿದೆ.

ವಸತಿ ಶಾಲೆಯಲ್ಲಿರುವ ಕೆಲವು ಮಕ್ಕಳಲ್ಲಿ ಕೆಮ್ಮು, ಜ್ವರ ಕಾಣಿಸಿಕೊಂಡ ಹಿನ್ನೆಲೆ ಉಳಿದ ವಿದ್ಯಾರ್ಥಿಗಳು ಅಂತರ ಕಾಪಾಡಿಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ನವೋದಯ ಶಾಲೆಯಲ್ಲಿ ವೈರಸ್​ ಕಾಣಿಸಿಕೊಂಡಿರುವುದು ಜಿಲ್ಲೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಓದಿ:'ಕುಮಾರಸ್ವಾಮಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ, ಅವರಿಗೆ ಬಾಯಿ ಚಪಲ': ಚಲುವರಾಯ ಸ್ವಾಮಿ ಆರೋಪ

ABOUT THE AUTHOR

...view details