ಕೊಡಗು :ಮನೆಯೊಂದರಲ್ಲಿ ಅಡಗಿದ್ದ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಬಿ ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.
ಅಬ್ಬಾ....! ಇಷ್ಟೊಂದು ಉದ್ದದ ಕಾಳಿಂಗ ಸರ್ಪ! - ಕೊಡಗು ಕಾಳಿಂಗ ಸರ್ಪ ಸೆರೆ
ಮನೆಯೊಂದರಲ್ಲಿ ಅಡಗಿದ್ದ ಸುಮಾರು 15 ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಸೆರೆ ಹಿಡಿದಿರುವ ಘಟನೆ ಸೋಮವಾರಪೇಟೆ ತಾಲೂಕಿನ ಬಿ ಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.
15 ಅಡಿ ಉದ್ದದ ಕಾಳಿಂಗ ಸರ್ಪ
ಗ್ರಾಮದ ನಾಮೇರ ಬೋಸು ಎಂಬುವರ ಮನೆಯಲ್ಲಿ ಇದ್ದ ಹಾವನ್ನು ಉರಗ ತಜ್ಞ ಅಲೆಮಂಡ ನವೀನ್ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಇದಕ್ಕೂ ಮೊದಲು ಮೈದಾನದಲ್ಲಿ ಕೆಲ ಕಾಲ ಹಾವನ್ನು ಜನರ ವೀಕ್ಷಣೆಗೆ ಬಿಡಲಾಗಿತ್ತು, ಇಷ್ಟು ಉದ್ದದ ಹಾವು ಕಂಡು ಜನ ಆತಂಕ ಹಾಗೂ ಅಚ್ಚರಿಯಿಂದ ವೀಕ್ಷಿಸಿದರು.