ಕೊಡಗು:15 ಅಡಿ ಉದ್ದದ, ಸುಮಾರು 50 ಕೆ.ಜಿ ತೂಕವಿರುವ ಬೃಹತ್ ಗಾತ್ರದ ಹೆಬ್ಬಾವನ್ನು ಜಿಲ್ಲೆಯ ಸೋಮವಾರಪೇಟೆ ತಾಲೂನ ಹಾರಂಗಿ ಡ್ಯಾಂ ಬಳಿ ಸೆರೆ ಹಿಡಿಯಲಾಗಿದೆ. ಹಾರಂಗಿ ಹಿನ್ನೀರಿನಲ್ಲಿ ಕೆಲವು ವರ್ಷಗಳ ಹಿಂದೆ ಹೆಬ್ಬಾವೊಂದು ಕಾಣಿಸಿಕೊಂಡು ಮರೆಯಾಗಿತ್ತು.
ಕೊಡಗು: 15 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಸೆರೆ - ಕೊಡಗು
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂನ ಹಾರಂಗಿ ಡ್ಯಾಂ ಬಳಿ ಬೃಹತ್ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ.
ಕೊಡಗಿನಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆ
ಕಳೆದ ಶನಿವಾರ(ಜೂ.11) ರಾತ್ರಿ ವೇಳೆ ಹೆಬ್ಬಾವು ಆಹಾರ ಅರಸಿ ಅಣೆಕಟ್ಟೆಯಿಂದ ಸ್ವಲ್ಪ ದೂರ ಬಂದಿದ್ದು, ಸಂಚಾರ ಮಾಡುವ ಜನರಿಗೆ ಕಾಣಿಸಿಕೊಂಡಿದೆ. ರಾತ್ರಿಯಾದ ಕಾರಣ ಸ್ವಲ್ಪ ಸಮಯದಲ್ಲಿ ಹಾವು ಮರೆಯಾಗಿತ್ತು. ಮುಂಜಾನೆ ಮತ್ತೆ ಹುಡುಕಾಟ ನಡೆಸಿದಾಗ ಹೆಬ್ಬಾವು ಪತ್ತೆಯಾಗಿದ್ದು, ಸಾರ್ವಜನಿಕರು ಉರುಗ ತಜ್ಞರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಉರಗ ತಜ್ಞ ಹೊಸಕೋಟೆಯ ಸ್ನೇಕ್ ಪ್ರವೀಣ್ ಹೆಬ್ಬಾವನ್ನು ಸೆರೆ ಹಿಡಿದು ಅರಣ್ಯ ಇಲಾಖೆಯ ಸಹಯೋಗದಲ್ಲಿ ಆನೆಕಾಡು ಅರಣ್ಯಕ್ಕೆ ಬಿಟ್ಟಿದ್ದಾರೆ.