ಕರ್ನಾಟಕ

karnataka

ETV Bharat / state

ಕೊಡಗು ಜಿಲ್ಲೆಯಾದ್ಯಂತ ಆಗಸ್ಟ್‌ 24 ರಿಂದ ನಾಲ್ಕು ದಿನ ನಿಷೇಧಾಜ್ಞೆ ಜಾರಿ

ಕೊಡಗಿನಲ್ಲಿ ಆಗಸ್ಟ್‌ 24 ರಿಂದ ನಾಲ್ಕು ದಿನ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಆದೇಶಿಸಿದ್ದಾರೆ.

kodagu
ಕೊಡಗು

By

Published : Aug 23, 2022, 9:17 AM IST

ಕೊಡಗು:ಆ.26ರಂದು ಕಾಂಗ್ರೆಸ್​​ನಿಂದ ಮಡಿಕೇರಿ‌ ಚಲೋ ಹಾಗೂ ಬಿಜೆಪಿಯಿಂದ ಜನಜಾಗೃತಿ ಸಮಾವೇಶ ನಡೆಯಲಿದ್ದು ಮುಂಜಾಗ್ರತಾ ಕ್ರಮವಾಗಿ ಆ.24 ಬೆಳಗ್ಗೆ 6 ಗಂಟೆಯಿಂದ ಆ.27 ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ಸತೀಶ್‌ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಯಾವುದೇ ಸಭೆ, ಸಮಾರಂಭ ನಡೆಸುವಂತಿಲ್ಲ. ಘೋಷಣೆ ಕೂಗುವಂತಿಲ್ಲ. ಹೆಚ್ಚು ಜನರು ಸೇರುವಂತಿಲ್ಲ. ವಿಜಯೋತ್ಸವ ಮಾಡುವಂತಿಲ್ಲ. ಕೊಡಗು ಮತೀಯ ಸೂಕ್ಷ್ಮ ಪ್ರದೇಶವಾಗಿದ್ದು ಅಹಿತಕರ ಘಟನೆ ನಡೆಯದಂತೆ ಈ ಕ್ರಮ ಕೈಗೊಳ್ಳಲಾಗಿದೆ. 24ರ ಬೆಳಿಗ್ಗೆ 6 ಗಂಟೆಯಿಂದ ಆ.27ರ ಮಧ್ಯರಾತ್ರಿ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್​ನಿಂದ ‌ಮಡಿಕೇರಿ ಚಲೋ; ಆಗಸ್ಟ್ 26ಕ್ಕೆ ಪ್ರತಿಭಟನೆ

ABOUT THE AUTHOR

...view details