ಮಡಿಕೇರಿ: ಯುಕೆ ಹಾಗೂ ಕೆನಡಾ ರಾಷ್ಟ್ರಗಳಿಂದ ಬಂದ 11 ಜನರ ಮಾಹಿತಿಯನ್ನು ಕಲೆ ಹಾಕಿ ಅವರ ಗಂಟಲು ದ್ರವವನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಡಿಹೆಚ್‌ಒ ಮೋಹನ್ ಕುಮಾರ್ ತಿಳಿಸಿದ್ದಾರೆ.
ಮಡಿಕೇರಿ: ವಿದೇಶದಿಂದ ಬಂದ 11 ಪ್ರಯಾಣಿಕರ ಗಂಟಲು ದ್ರವ ಸಂಗ್ರಹ - Foreign travelers throat fluid collection at madikeri
ವಿದೇಶದಿಂದ ಬಂದ 11 ಜನರ ಗಂಟಲು ದ್ರವವನ್ನು ಆರ್‌ಟಿಪಿಸಿಆರ್ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಡಿಹೆಚ್‌ಒ ಮೋಹನ್ ಕುಮಾರ್ ತಿಳಿಸಿದ್ದಾರೆ.
ವಿದೇಶಿ ಪ್ರಯಾಣಿಕರ ಕುರಿತು ಮಾಹಿತಿ ನೀಡಿದ ಮೋಹನ್ ಕುಮಾರ್
ವಿರಾಜಪೇಟೆ ತಾಲೂಕಿನಲ್ಲಿ 7, ಮಡಿಕೇರಿ ತಾಲೂಕಿನ 3 ಹಾಗೂ ಸೋಮವಾರಪೇಟೆ ತಾಲೂಕಿಗೆ ಇಬ್ಬರು ವಿದೇಶದಿಂದ ಬಂದಿದ್ದಾರೆ. ಈಗಾಗಲೇ ಅವರನ್ನು ಸಂಪರ್ಕಿಸಿ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿದ್ದೇವೆ ಎಂದರು.
ಇನ್ನೂ ಹನ್ನೊಂದು ಜನರಲ್ಲಿ ಮೂವರು ಚಿಕ್ಕಮಗಳೂರು, ಮಂಡ್ಯ ಹಾಗೂ ಮಂಗಳೂರು ಜಿಲ್ಲೆಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ ಈ ಕುರಿತಾದ ಮಾಹಿತಿಯನ್ನು ಆಯಾ ಡಿಹೆಚ್‌ಒಗಳಿಗೆ ತಿಳಿಸಿದ್ದೇವೆ. ಅವರೆಲ್ಲರೂ ಆರೋಗ್ಯವಾಗಿದ್ದು, ಇನ್ನಿಬ್ಬರ ಗಂಟಲು ದ್ರವವನ್ನು ಸಂಜೆ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.