ಕಲಬುರಗಿ :ಜಮೀನಿನ ವಿಚಾರಕ್ಕೆ ಯುವಕನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ, ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಅಫಜಲಪುರ ತಾಲೂಕಿನ ಗೌರ್ ಕೆ ಗ್ರಾಮದಲ್ಲಿ ನಡೆದಿದೆ. ಶಿರವಾಳ ಗ್ರಾಮದ ಅಕ್ಷಯ್ಕುಮಾರ್ ಕ್ಷತ್ರಿ (25) ಎಂಬಾತನೆ ಹತ್ಯೆಯಾದ ಯುವಕನಾಗಿದ್ದಾನೆ.
ಗೌರ ಬಿ ಗ್ರಾಮದ ನೀಲಪ್ಪ, ಮಲ್ಲು ಬಂಡೆ ಎಂಬುವರ ಜಮೀನನ್ನು ಅಕ್ಷಯ್ ಪಾಲುದಾರಿಕೆ ಪಡೆದು ಉಳುಮೆ ಮಾಡುತ್ತಿದ್ದ. ಅವಧಿ ಮುಗಿದ ನಂತರ ಜಮೀನಿನಲ್ಲಿ ಆತ ಹಾಕಿದ್ದ ಟಿನ್‌ಶೆಡ್ ಬಿಟ್ಟುಕೊಡಲು 10 ಸಾವಿರ ರೂಪಾಯಿ ಹಣ ಕೊಡಬೇಕು ಎಂದು ಒಪ್ಪಂದವಾಗಿತ್ತು.