ಕಲಬುರಗಿ :ನವ ವಿವಾಹಿತ ಮಹಿಳೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಡ್ರಾಮಿ ತಾಲೂಕಿನ ಸಾಥಖೇಡ ಗ್ರಾಮದಲ್ಲಿ ನಡೆದಿದೆ. ರಾಧಿಕಾ ಬಡಿಗೇರ ಆತ್ಮಹತ್ಯೆಗೆ ಶತಣಾದ ನವ ವಿವಾಹಿತೆ. ರಾಧಿಕಾಗೆ ಸಾಥಖೇಡ್ ಗ್ರಾಮದ ಸಿದ್ದು ಬಡೆಗೇರ ಎಂಬಾತನೊಂದಿಗೆ ಕಳೆದ 8 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು.
ಕಲಬುರಗಿ : ಮೂರು ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಶರಣು - ಕಲಬುರಗಿಯಲ್ಲಿ ಮೂರು ತಿಂಗಳ ಗರ್ಭಿಣಿಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆಗೆ ಶರಣು
ಯಡ್ರಾಮಿ ತಾಲೂಕಿನ ಸಾಥಖೇಡ ಗ್ರಾಮದಲ್ಲಿ ನವ ವಿವಾಹಿತ ಮಹಿಳೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ..
![ಕಲಬುರಗಿ : ಮೂರು ತಿಂಗಳ ಗರ್ಭಿಣಿ ಆತ್ಮಹತ್ಯೆಗೆ ಶರಣು ನವ ವಿವಾಹಿತ ಮಹಿಳೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ](https://etvbharatimages.akamaized.net/etvbharat/prod-images/768-512-14450197-thumbnail-3x2-mm.jpg)
ನವ ವಿವಾಹಿತ ಮಹಿಳೆ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ
ಸದ್ಯ ರಾಧಿಕಾ ಮೂರು ತಿಂಗಳ ಗರ್ಭಿಣಿಯಾಗಿದ್ದರು. ಗರ್ಭದಲ್ಲಿ ಮಗುವಿನ ಚಿತ್ರ ಮೂಡುವ ಮುನ್ನವೇ, ಗ್ರಾಮದ ಹೊರಭಾಗದಲ್ಲಿರುವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತೈಜಿಸಿದ್ದಾಳೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ, ಸ್ಥಳಕ್ಕೆ ಜೇವರ್ಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಸ್ಥಳೀಯರ ಸಹಾಯದಿಂದ ಮೃತ ದೇಹವನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆ ನಂತರವಷ್ಟೇ ಆತ್ಮಹತ್ಯೆಗೆ ಕಾರಣ ತಿಳಿಯಬೇಕಿದೆ.