ಕರ್ನಾಟಕ

karnataka

ETV Bharat / state

ಹಳ್ಳದ ನೀರಿನಲ್ಲಿ ಕೊಚ್ಚಿಹೋದ ಯುವತಿ.. ಭಾರಿ ಮಳೆಗೆ ನಲುಗಿದ ಕಲಬುರಗಿ ಮಂದಿ - ಪೊಲೀಸರು ಯುವತಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ

ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ತಾಯಿಯೊಂದಿಗೆ ಬಟ್ಟೆ ತೊಳೆಯಲು ಹಳ್ಳಕ್ಕೆ ಹೋಗಿದ್ದಾಗ ನೀರಿನ ರಭಸ ಹೆಚ್ಚಾಗಿ ಯುವತಿಯೊಬ್ಬಳು ಕೊಚ್ಚಿಹೋಗಿದ್ದಾರೆ.

young woman washed away in river
ಹಳ್ಳದ ನೀರಿಗೆ ಕೊಚ್ಚಿಹೋದ ಯುವತಿ

By

Published : Sep 10, 2022, 6:58 AM IST

ಕಲಬುರಗಿ: ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಮಳೆಯ ಅರ್ಭಟ ಜೋರಾಗಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆ ನೀರಿನಿಂದ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಯುವತಿಯೋರ್ವಳು ಕೊಚ್ಚಿಕೊಂಡು ಹೋದ ಘಟನೆ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಲಾಡ ಮುಗಳಿ ಗ್ರಾಮದಲ್ಲಿ ನಡೆದಿದೆ. ಲಾಡಮುಗಳಿ ಗ್ರಾಮದ ದಾನೇಶ್ವರಿ (18) ಹಳ್ಳದಲ್ಲಿ ಕೊಚ್ಚಿ ಹೋಗಿರುವ ಯುವತಿ ಎಂದು ಗುರುತಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ತಾಯಿಯ ಜೊತೆ ಊರ ಹೊರಗೆ ಇರುವ ಹಳ್ಳಕ್ಕೆ ಬಟ್ಟೆ ತೊಳೆಯೋದಕ್ಕೆ ಹೋಗಿದ್ದ ದಾನೇಶ್ವರಿ, ಬಟ್ಟೆ ತೊಳೆಯುವಾಗ ನೀರಿನ ರಭಸ ಹೆಚ್ಚಾಗಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾಳೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಯುವತಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಹರೆಯದ ಮಗಳನ್ನು ಕಳೆದುಕೊಂಡಿರುವ ಕುಟುಂಬಸ್ಥರು ಕಣ್ಣೀರಲ್ಲಿ ಮುಳುಗಿದ್ದಾರೆ‌‌. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಗಣೇಶ ಮೂರ್ತಿಗಳ ನಿಮಜ್ಜನದ ವೇಳೆ ದುರಂತ: ಪ್ರತ್ಯೇಕ ಘಟನೆಯಲ್ಲಿ 7 ಜನರ ಸಾವು

ABOUT THE AUTHOR

...view details