ಕಲಬುರಗಿ: ಚಿತ್ರರಂಗದಲ್ಲಿ ಈ ಹಿಂದೆ ಡ್ರಗ್ಸ್ ಸೇವನೆ ಇರಲಿಲ್ಲ. ಇತ್ತೀಚೆಗೆ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಷಾದ ವ್ಯಕ್ತಪಡಿಸಿದರು.
ಚಿತ್ರರಂಗದಲ್ಲಿ ಈ ಹಿಂದೆ ಡ್ರಗ್ಸ್ ಸೇವನೆ ಇರಲಿಲ್ಲ: ಸಚಿವ ಬಿ.ಸಿ.ಪಾಟೀಲ್ ಕಲಬುರಗಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಪಾಟೀಲ್, ಡ್ರಗ್ಸ್ ಸೇವನೆ ತಮ್ಮ ಆರೋಗ್ಯ ಹಾಳು ಮಾಡುವುದರ ಜೊತೆಗೆ ಸಾಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವಂತೆ ಮಾಡುತ್ತದೆ. ನಮ್ಮ ಕಾಲದಲ್ಲಿ ಡ್ರಗ್ಸ್ ಎಂಬುದು ಇರಲೇ ಇಲ್ಲ. ಅದೊಂದು ಕಾಲ ಇತ್ತು. ಕಲಾವಿದರು ಕ್ಯಾಮರಾ ಮತ್ತು ಕ್ಯಾಮರಾಮನ್ಗೆ ನಮಸ್ಕಾರ ಮಾಡ್ತಿದ್ವಿ. ಇದೀಗ ಚಿತ್ರರಂಗದಲ್ಲಿ ಎಲ್ಲಾ ಹಾಯ್ ಬಾಯ್ ಸಂಸ್ಕೃತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡ್ರಗ್ಸ್ ಎಲ್ಲಾ ರಂಗದಲ್ಲೂ ಇದೆ. ಚಿತ್ರರಂಗದವರು ಬೇಗ ಎದ್ದು ಕಾಣ್ತಾರೆ. ಆದ್ರೆ ಈ ತರಹ ಡ್ರಗ್ಸ್ ತೆಗೆದುಕೊಳ್ಳುವ ಕಲಾವಿದರನ್ನು ಫಾಲೋ ಮಾಡಿದ್ರೆ ದೇಶಕ್ಕೆ ಮಾರಕ ಎಂದರು.
ಜಮೀರ್ ಪ್ರಚಾರಪ್ರಿಯ: ಶಾಸಕ ಜಮೀರ್ ಕ್ಯಾಸಿನೋ ವಿಚಾರಚಾಗಿ ಪ್ರತಿಕ್ರಿಯೆ ನೀಡಿದ ಬಿ.ಸಿ.ಪಾಟೀಲ್, ಕ್ಯಾಸಿನೋಗೆ ಹೊರ ದೇಶದಲ್ಲಿ ಅನುಮತಿ ಇದೆ. ಹಾಗಾಗಿ ಜಮೀರ್ ಹೋಗಿದ್ದಾರೆ. ಡ್ರಗ್ಸ್ ಪೆಡ್ಲರ್ಗಳ ಜೊತೆ ಸಂಪರ್ಕ ಹೊಂದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳತ್ತಾರೆ. ಇನ್ನು ಜಮೀರ್ ಅಹ್ಮದ್ ಆರೋಪ ಸಾಬೀತಾದ್ರೆ ಸರ್ಕಾರಕ್ಕೆ ತನ್ನ ಆಸ್ತಿ ಬರೆದು ಕೊಡುತ್ತೇನೆ ಎಂದಿದ್ದಾರೆ. ಯಡಿಯೂರಪ್ಪ ಸಿಎಂ ಆದ್ರೆ ವಾಚ್ಮನ್ ಆಗುತ್ತೇನೆ ಎಂದು ಹೇಳಿದ್ರು. ಇದೀಗ ಸರ್ಕಾರಕ್ಕೆ ಆಸ್ತಿ ಬರೆದು ಕೊಡೋದಾಗಿ ಹೇಳಿದ್ದಾರೆ. ಈ ರೀತಿಯ ಹೇಳಿಕೆಗಳನ್ನು ನೋಡುತ್ತಾ ಹೋದರೆ ಕೇವಲ ಪ್ರಚಾರಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಸಿಎಂ ಅವರಿಗೆ ಕೇಳಿ: ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ಕುರಿತು ನಾಳೆ ಸಿಎಂ ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಬರ್ತಾರೆ. ಅವರನ್ನೇ ಕೇಳಿ. ನಮ್ಮ ಜೊತೆಗೆ ಬಂದವರಿಗೆ ಸ್ಥಾನ ಕೊಡಬೇಕು. ಮಂತ್ರಿ ಸ್ಥಾನ ಬಿಟ್ಟು ಬಂದವರಿಗೆ ಸ್ಥಾನ ಕೊಡ್ತಾರೆ. ಯಡಿಯೂರಪ್ಪನವರು ಯಾರಿಗೂ ಕೈ ಬಿಟ್ಟಿಲ್ಲ. ಎಲ್ಲರಗೂ ಸೂಕ್ತ ಸ್ಥಾನಮಾನ ಕೊಡ್ತಾರೆ ಎಂದರು.