ಕಲಬುರಗಿ:ನಡೆದುಕೊಂಡು ಹೊರಟಿದ್ದ ಯುವಕನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಹಣ, ಮೊಬೈಲ್ ಕಸಿದುಕೊಂಡು ಹೋಗಿರುವ ಘಟನೆ ಇಲ್ಲಿನ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಜನಗರದಲ್ಲಿ ವಾಸಿಸುತ್ತಿರುವ ಸಂದೀಪ್ ಕುಮಾರ್ ಜನಿಹರ್ (20) ದುಷ್ಕರ್ಮಿಗಳಿಂದ ಗಾಯಗೊಂಡಿರುವ ಯುವಕ. ಉತ್ತರ ಪ್ರದೇಶದ ಲಖಿಪುರ ಮೂಲದ ಸಂದೀಪ್ ಕುಮಾರ್, ಸಿಮೆಂಟ್ ಹೂಕುಂಡಗಳನ್ನು ತಯಾರಿಸುವ ಕೆಲಸ ಮಾಡುತ್ತಿದ್ದ. ಸಾಯಂಕಾಲ ನಡೆದುಕೊಂಡು ಹೋಗುವಾಗ ಬೈಕ್ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹಣ, ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.