ಕರ್ನಾಟಕ

karnataka

ETV Bharat / state

ಕಲಬುರಗಿ : ಹೋಳಿ ಹಬ್ಬಕ್ಕೆ ಊರಿಗೆ ಬಂದವನನ್ನು ಕೊಂದು ಸುಟ್ಟು ಹಾಕಿದ ಕಿರಾತಕರು - ಕಲಬುರಗಿಯಲ್ಲಿ ವ್ಯಕ್ತಿಯ ಕೊಲೆಗೈದು ಅರ್ಧಂಬರ್ಧ ಶವ ಸುಟ್ಟು ಪರಾರಿಯಾದ ಹಂತಕರು

ಕಲಬುರಗಿ ನಗರದ ಹೊರವಲಯದ ತಾಜಸುಲ್ತಾನಪುರನಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿ ಸುಟ್ಟುಹಾಕಿರುವ ಘಟನೆ ನಡೆದಿದೆ. ಮೃತನನ್ನು ಸುಲ್ತಾನಪುರ ಗ್ರಾಮದ ನಿವಾಸಿ ಮನೋಹರ ರುದ್ರಕರ್ ಎಂದು ಗುರುತಿಸಲಾಗಿದೆ.

ಕಲಬುರಗಿಯಲ್ಲಿ ವ್ಯಕ್ತಿಯ ಕೊಲೆ
ಕಲಬುರಗಿಯಲ್ಲಿ ವ್ಯಕ್ತಿಯ ಕೊಲೆ

By

Published : Mar 17, 2022, 9:22 PM IST

ಕಲಬುರಗಿ : ಮಹಾರಾಷ್ಟ್ರದ ಪುಣೆಯಿಂದ ಎರಡು ದಿನಗಳ ಹಿಂದಷ್ಟೇ ಗ್ರಾಮಕ್ಕೆ ಬಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿ ಸುಟ್ಟುಹಾಕಿರುವ ಘಟನೆ ನಗರದ ಹೊರವಲಯದ ತಾಜಸುಲ್ತಾನಪುರನಲ್ಲಿ ನಡೆದಿದೆ. ಸುಲ್ತಾನಪುರ ಗ್ರಾಮದ ನಿವಾಸಿ ಮನೋಹರ ರುದ್ರಕರ್ (35) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಮನೋಹರ ಪುಣೆಯಲ್ಲಿ ವಾಸವಿದ್ದನು. ಹೋಳಿ ಹಬ್ಬದ ಪ್ರಯುಕ್ತ ಎರಡು ದಿನಗಳ ಹಿಂದಷ್ಟೇ ಗ್ರಾಮಕ್ಕೆ ಆಗಮಿಸಿದ್ದ ಎನ್ನಲಾಗ್ತಿದೆ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮನೆಯಿಂದ ಹೊರಹೋಗಿದ್ದ ಮನೋಹರನನ್ನು ಕೊಲೆಗೈದು ಗ್ರಾಮದಿಂದ ಕೊಂಚ ದೂರದಲ್ಲಿ ಸುಟ್ಟುಹಾಕಲಾಗಿದೆ. ದೇಹ ಅರ್ಧಂಬರ್ಧ ಸುಟ್ಟು ಕರಕಲಾಗಿದೆ. ಕೊಲೆಗೆ ಕಾರಣ ಏನು? ಹಂತಕರು ಯಾರು? ಅನ್ನೋದು ತಿಳಿದುಬಂದಿಲ್ಲ.

ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಂತಕರ ಬಂಧನಕ್ಕೆ ಜಾಲ ಬೀಸಿದ್ದಾರೆ.

ABOUT THE AUTHOR

...view details