ಕರ್ನಾಟಕ

karnataka

ETV Bharat / state

ಕಲಬುರಗಿ: ಯುವಕನ ಕೊಲೆಗೈದು ರೈಲ್ವೆ ಹಳಿಗೆ ಎಸೆದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ - ಕಲಬುರಗಿ ಯುವಕನ ಕೊಲೆ

ಯುವಕನ ಮೇಲೆ ರೈಲು ಹರಿದು ದೇಹ ಛಿದ್ರವಾಗಿದೆ. ದೇಹದಿಂದ ರುಂಡ ಸಹ ಬೆರ್ಪಟ್ಟಿದ್ದು, ಆತ ಯಾರೆಂಬ ಗುರುತು ಸಹ ಸಿಗದಂತಾಗಿದೆ.

young-man-found-dead-on-railway-track-in-kalaburagi
ಕಲಬುರಗಿ ಯುವಕನ ಕೊಲೆ

By

Published : Jan 27, 2022, 2:05 AM IST

ಕಲಬುರಗಿ:ಯುವಕನನ್ನು ಹತ್ಯೆಗೈದು ರೈಲ್ವೆ ಹಳಿ ಮೇಲೆ ಬಿಸಾಡಿ, ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿರುವ ಘಟನೆ ಕಲಬುರಗಿಯ ಸಾವಳಗಿ ಬಳಿ ನಡೆದಿದೆ.

ಕೊಲೆಯಾದ ಯುವಕ ಯಾರು ಎಂಬ ಮಾಹಿತಿ ತಿಳಿದುಬಂದಿಲ್ಲ, ಆತನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಎಸೆದಿರುವ ಅನುಮಾನ ವ್ಯಕ್ತವಾಗಿದೆ. ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ, ಬಳಿಕ ರೈಲ್ವೆ ಹಳಿ ಮೇಲೆ ಶವವನ್ನು ಬಿಸಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಲಾಗಿದೆ.

ಯುವಕನ ಕೊಲೆಗೈದು ರೈಲ್ವೆ ಹಳಿ ಮೇಲೆ ಎಸೆದ ದುಷ್ಕರ್ಮಿಗಳು

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಯುವಕನ ಮೇಲೆ ರೈಲು ಹರಿದು ದೇಹ ಛಿದ್ರವಾಗಿದೆ. ರುಂಡ ಬೆರ್ಪಟ್ಟಿದ್ದು, ಆತ ಯಾರೆಂಬ ಗುರುತು ಸಹ ಸಿಗದಂತಾಗಿದೆ. ಬಲಗೈ ಮೇಲೆ ತ್ರಿಶೂಲದ ಹಚ್ಚೆ ಇದೆ.

ಈ ಕುರಿತು ವಾಡಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಜಗಳ ಬಿಡಿಸಲು ಹೋಗಿ ವಿನಾಕಾರಣ ಪ್ರಾಣ ಕಳೆದುಕೊಂಡ ವೃದ್ಧೆ; ಕುಷ್ಟಗಿಯಲ್ಲಿ ಇಬ್ಬರು ಅರೆಸ್ಟ್​

ABOUT THE AUTHOR

...view details