ಕರ್ನಾಟಕ

karnataka

ETV Bharat / state

'ನನ್ನಿಂದ ಓದೋಕೆ ಆಗುತ್ತಿಲ್ಲ.. ಅಪ್ಪ-ಅಮ್ಮ  ಕ್ಷಮಿಸಿಬಿಡಿ': ಡೆತ್‌ನೋಟ್ ಬರೆದಿಟ್ಟು ಕಲಬುರಗಿಯಲ್ಲಿ ಯುವಕ ಆತ್ಮಹತ್ಯೆ - ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಆತ್ಮಹತ್ಯೆಗೂ ಮುನ್ನ ಯುವಕ 'ನನ್ನಿಂದ ಓದೋಕೆ ಆಗುತ್ತಿಲ್ಲ.. ಅಪ್ಪ ಅಮ್ಮ ಕ್ಷಮಿಸಿಬಿಡಿ' 'ನನ್ನ ಸಾವಿಗೆ ನಾನೇ ಕಾರಣವೆಂದು' ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ಕಲಬುರಗಿಯಲ್ಲಿ ಈ ಘಟನೆ ನಡೆದಿದೆ.

ಕಲಬುರಗಿಯಲ್ಲಿ ಯುವಕ ಆತ್ಮಹತ್ಯೆ
ಕಲಬುರಗಿಯಲ್ಲಿ ಯುವಕ ಆತ್ಮಹತ್ಯೆ

By

Published : Dec 5, 2021, 4:27 PM IST

ಕಲಬುರಗಿ: 'ನನ್ನಿಂದ ಓದೋಕೆ ಆಗುತ್ತಿಲ್ಲ. ಅಪ್ಪ- ಅಮ್ಮ ನನ್ನನ್ನು ಕ್ಷಮಿಸಿಬಿಡಿ' ಎಂದು ಡೆತ್‌ನೋಟ್ ಬರೆದಿಟ್ಟು ಯುವಕನೋರ್ವ ನೇಣಿಗೆ ಶರಣಾದ ಘಟನೆ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ವಸತಿ ಗೃಹದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ತಿಗಟಿ ಗ್ರಾಮ‌ದ ನಿವಾಸಿ ಮಂಜುನಾಥ (23) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. ಪೊಲೀಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ಪೋಷಕರು ಮಗನನ್ನ ಕಲಬುರಗಿ ಹೊರವಲಯದ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಅಧಿಕಾರಿಯೊಬ್ಬರ ಮನೆಯಲ್ಲಿ ತಂದು ಬಿಟ್ಟಿದ್ದರು.

ಪೋಷಕರ ಆಸೆಯಂತೆ ಅಧಿಕಾರಿಯ ಮನೆಯಲ್ಲಿದ್ದು ಓದುತ್ತಿದ್ದ ಮಂಜುನಾಥ, ಓದಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ 'ನನ್ನಿಂದ ಓದೋಕೆ ಆಗುತ್ತಿಲ್ಲ.. ಅಪ್ಪ ಅಮ್ಮ ಕ್ಷಮಿಸಿಬಿಡಿ' 'ನನ್ನ ಸಾವಿಗೆ ನಾನೇ ಕಾರಣವೆಂದು' ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ‌ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details