ಕರ್ನಾಟಕ

karnataka

ETV Bharat / state

ಡಾ. ಅಂಬೇಡ್ಕರ್​ಗೆ ಅವಮಾನ ಆರೋಪ: ಕಲಬುರಗಿಯಲ್ಲಿ ಯುವಕ ಅರೆಸ್ಟ್​ - ಲೆಟೆಸ್ಟ್ ಕಲಬುರಗಿ ಯುವಕ ಅರೆಸ್ಟ್ ನ್ಯೂಸ್

ಅವಮಾನಕರ ರೀತಿಯಲ್ಲಿದ್ದ ಡಾ.ಬಿ.ಆರ್.​ ಅಂಬೇಡ್ಕರ್ ಭಾವಚಿತ್ರವನ್ನು ವಾಟ್ಸ್ಯಾಪ್ ಸ್ಟೇಟಸ್ ಹಾಕಿಕೊಂಡಿದ್ದ ಆರೋಪದ ಮೇಲೆ ಸುಗೂರು ಗ್ರಾಮದ ಶರಣಪ್ಪ ನಾಯ್ಕೋಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಅವಮಾನಕರ ರೀತಿಯಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ವಾಟ್ಸಪ್ ಸ್ಟೇಟಸ್ ಇಟ್ಟುಕೊಂಡಿದ್ದ ಯುವಕ ಅಂದರ್

By

Published : Nov 14, 2019, 12:00 PM IST

ಕಲಬುರಗಿ:ಅವಮಾನಕರ ರೀತಿಯಲ್ಲಿದ್ದ ಸಂವಿಧಾನ ಶಿಲ್ಪಿ ಡಾ. ಬಿ. ಆರ್.​ ಅಂಬೇಡ್ಕರ್ ಅವರ ಭಾವಚಿತ್ರವನ್ನು ವಾಟ್ಸ್ಯಾಪ್​ ಸ್ಟೇಟಸ್ ಇಟ್ಟುಕೊಂಡಿದ್ದ ಆರೋಪದಡಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಸುಗೂರು ಗ್ರಾಮದ ಶರಣಪ್ಪ ನಾಯ್ಕೋಡಿ ಬಂಧಿತ ಆರೋಪಿ. ಈತ ಅಂಬೇಡ್ಕರ್ ಅವರಿಗೆ ಅವಮಾನ ಆಗುವ ರೀತಿಯಲ್ಲಿ ಭಾವಚಿತ್ರ ಸೃಷ್ಟಿಸಿ ಅದನ್ನು ತನ್ನ ವಾಟ್ಸ್ಯಾಪ್ ಸ್ಟೇಟಸ್ ಆಗಿ ಇಟ್ಟುಕೊಂಡಿದ್ದನ್ನು ಗಮನಿಸಿದ ದಲಿತ ಮುಖಂಡರು ತಿಳಿಹೇಳಿದರೂ ಸಹ ಅವರ ಮಾತನ್ನು ಕಡೆಗಣಿಸಿದ್ದ ಎಂದು ಆರೋಪಿಸಲಾಗಿದೆ. ಹೀಗಾಗಿ ವಾಡಿ ಪೊಲೀಸ್ ಠಾಣೆಯಲ್ಲಿ ಶರಣಪ್ಪನ ವಿರುದ್ಧ ಪ್ರಕರಣ ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ಶರಣಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details