ಕರ್ನಾಟಕ

karnataka

ETV Bharat / state

ವಿಡಿಯೋ ಗೇಮ್ ಆಡಬೇಡ ಎಂದಿದ್ದೇ ತಪ್ಪಾಯ್ತು... ಬಾಲಕ ನೇಣಿಗೆ ಶರಣು - ವಿಡಿಯೋ ಗೇಮ್

ವಿಡಿಯೋ ಗೇಮ್ ಆಡಬೇಡ ಎಂದು ಬೈದಿದ್ದಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

kalaburagi
ನೇಣಿಗೆ ಶರಣು

By

Published : Jul 3, 2020, 9:19 PM IST

ಕಲಬುರಗಿ: ವಿಡಿಯೋ ಗೇಮ್ ಆಡಬೇಡ ಎಂದು ಬೈದಿದ್ದಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬ್ರಹ್ಮಪುರ ಬಡಾವಣೆಯಲ್ಲಿ ನಡೆದಿದೆ.

ರಾಹುಲ್ ಸೊಲ್ಲಾಪುರ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಮನೆಯಲ್ಲೇ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿನ್ನೆ ಸಂಜೆ ಮೊಬೈಲ್​ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ ರಾಹುಲ್​ಗೆ ಆಡಬೇಡ ಎಂದು ಪೋಷಕರು ಬೈದಿದ್ದರು. ಇದೆ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details