ಕರ್ನಾಟಕ

karnataka

ETV Bharat / state

ಜನರನ್ನು ರೋಗ ಮುಕ್ತಗೊಳಿಸುವ ಧ್ಯೇಯದೊಂದಿಗೆ ಪ್ರಗತಿಪರ ರೈತನಿಂದ ಯೋಗ ತರಬೇತಿ! - Kalaburagi

ಜಿಲ್ಲೆಯ ಪ್ರಗತಿಪರ ರೈತ ಸೊಮನಾಥ ರೆಡ್ಡಿ ಪುರಮಾ, ಜನರನ್ನು ರೋಗ ಮುಕ್ತಗೊಳಿಸುವ ಧ್ಯೇಯದೊಂದಿಗೆ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಯೋಗ ತರಬೇತಿ ನೀಡುತ್ತಿದ್ದಾರೆ.

ಮನಕುಲವನ್ನು ರೋಗ ಮುಕ್ತಗೊಳಿಸುವ ಧ್ಯೇಯದೊಂದಿಗೆ ಯೋಗ ತರಬೇತಿ ನೀಡುತ್ತಿರುವ ಪ್ರಗತಿಪರ ರೈತ

By

Published : Jun 21, 2019, 8:06 AM IST


ಕಲಬುರಗಿ:ಜಿಲ್ಲೆಯ ಪ್ರಗತಿಪರ ರೈತ ಸೋಮನಾಥ ರೆಡ್ಡಿ ಪೂರಮಾ, ವಿಷಮುಕ್ತ ಆಹಾರ ನೀಡಬೇಕೆಂಬ ಉದ್ದೇಶದಿಂದ ಹಲವು ವರ್ಷಗಳಿಂದ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅದರಂತೆ ಮನುಕುಲವನ್ನು ರೋಗ ಮುಕ್ತಗೊಳಿಸುವ ಧ್ಯೇಯದೊಂದಿಗೆ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಯೋಗ ತರಬೇತಿ ನೀಡುತ್ತಿದ್ದಾರೆ.

ಜನರನ್ನು ರೋಗ ಮುಕ್ತಗೊಳಿಸುವ ಧ್ಯೇಯದೊಂದಿಗೆ ಯೋಗ ತರಬೇತಿ ನೀಡುತ್ತಿರುವ ಪ್ರಗತಿಪರ ರೈತ

ಇಳಿ ವಯಸ್ಸಿನಲ್ಲಿಯೂ ಯುವಕರಂತೆ ವಿಭಿನ್ನ ಯೋಗ ಅಭ್ಯಾಸದಲ್ಲಿ ತೊಡಗಿರುವ ಇವರು, ಮೂಲತಃ ಸೇಡಂ ತಾಲೂಕಿನ ಕೋಡ್ಲಾ ಗ್ರಾಮದವರು. 66 ವರ್ಷದ ಸೋಮನಾಥ ರೆಡ್ಡಿ ಪೂರಮಾ ಪ್ರಗತಿಪರ ರೈತ. ಜೊತೆಗೆ ಯೋಗ ಪಂಡಿತ ಎಂದು ಹೆಸರುವಾಸಿಯಾಗಿದ್ದಾರೆ‌. ಕಳೆದ 10 ವರ್ಷಗಳಿಂದ ಯೋಗ ಸಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 85 ಕೆಜಿ ತೂಕ, ಮಂಡಿ ನೋವು ಸೇರಿದಂತೆ ಹತ್ತು ಹಲವು ದೈಹಿಕ ಸಮಸ್ಯೆ ಎದುರಿಸುತ್ತಿದ್ದ ಸೋಮನಾಥ ರೆಡ್ಡಿ ಯೋಗಾಭ್ಯಾಸಕ್ಕೆ ಅಣಿಯಾಗಿದ್ದಾರೆ. ಯೋಗ ಆರಂಭಿಸಿದ ನಂತರ 55 ಕೆಜಿಗೆ ಇಳಿದಿದ್ದು, ಅವರೊಬ್ಬರೇ ಯೋಗಾಭ್ಯಾಸ ಮಾಡದೆ ರೈತ ಸಮುದಾಯವನ್ನು ಯೋಗದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದಾರೆ. ಕೋಡ್ಲಾ ಗ್ರಾಮದಲ್ಲಿ ಶಾಲಾ ಮಕ್ಕಳಿಂದ ಹಿಡಿದು ರೈತರವರೆಗೆ ಸೋಮನಾಥ ರೆಡ್ಡಿ ಅವರಿಂದ ಯೋಗ ತರಬೇತಿ ಪಡೆಯುತ್ತಿದ್ದಾರೆ. ಭೂಮಿ ರೋಗಮುಕ್ತಗೊಂಡಂತೆ ರೈತರೂ ರೋಗ ಮುಕ್ತವಾಗಬೇಕಿದೆ ಎನ್ನುವ ಉದ್ದೇಶದಿಂದ ತಾವು ಯೋಗ ಕಲಿತು ಪ್ರತಿನಿತ್ಯ ರೈತರಿಗೂ ಯೋಗಾಭ್ಯಾಸ ಮಾಡಿಸುತ್ತಿದ್ದಾರೆ. ನಮ್ಮ ಶರೀರದಲ್ಲಿಯೇ ವೈದ್ಯನಿರುತ್ತಾನೆ. ಆತನನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದರೆ ಯೋಗದ ಅವಶ್ಯಕತೆ ಇದ್ದು, ನಿಯಮಿತವಾಗಿ ಯೋಗಾಭ್ಯಾಸ ಮಾಡುತ್ತಾ ಸಾಗಿದರೆ ವೈದ್ಯನ ಬಳಿಗೆ ಹೋಗುವ ಅವಶ್ಯಕತೆಯೇ ಬೀಳುವುದಿಲ್ಲ ಎನ್ನುತ್ತಾರೆ ಸೋಮನಾಥ ರೆಡ್ಡಿ ಪುರಮಾ.

ಕಿಡ್ನಿ ಸಮಸ್ಯೆ, ಮೂಲವ್ಯಾಧಿ ಸೇರಿದಂತೆ ಹಲವು ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಇವರು ಯೋಗ ತರಬೇತಿ ನೀಡುತ್ತಿದ್ದಾರೆ. ಯಾವ ಸಮಸ್ಯೆಗೆ ಯಾವ ಆಸನ ಮಾಡಬೇಕು ಎಂಬುದು ಸೇರಿದಂತೆ ಊಟ ಉಪಚಾರದ ರೀತಿ ನೀತಿಗಳನ್ನು ತಿಳಿಸಿಕೊಡುತ್ತಾರೆ. ಇವರು ನೀಡಿದ ಮಾರ್ಗದರ್ಶನದನ್ವಯ ಹಲವರು ಕಿಡ್ನಿ ಕಲ್ಲಿನ ಸಮಸ್ಯೆ, ಮೂಲವ್ಯಾಧಿ ಇತ್ಯಾದಿ ಸಮಸ್ಯೆಗಳಿಂದ ಮುಕ್ತಿ ಹೊಂದಿದ್ದಾರೆ. ಸೋಮನಾಥ ರೆಡ್ಡಿ ಅವರ ಯೋಗ ಹಳ್ಳಿಯಿಂದ ದಿಲ್ಲಿಯವರೆಗೂ ಗಮನ ಸೆಳೆದಿದ್ದು, ಯೋಗ ಗುರು ಬಾಬಾ ರಾಮದೇವ್, ರವಿಶಂಕರ್ ಗುರೂಜಿ ಸೇರಿದಂತೆ ಮೊದಲಾದವರು ಇವರ ಸಂಪರ್ಕದಲ್ಲಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ರೈತರಿಗೆ ಮತ್ತು ಜನಸಾಮಾನ್ಯರಿಗೆ ಯೋಗದ ತರಬೇತಿ ನೀಡಿ ಹೆಸರು ಮಾಡಿರುವ ಇವರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವಾರು ಪ್ರಶಸ್ತಿಗಳು ಲಭಿಸಿವೆ.

For All Latest Updates

TAGGED:

Kalaburagi

ABOUT THE AUTHOR

...view details