ಕರ್ನಾಟಕ

karnataka

ETV Bharat / state

ಶಿವಲಿಂಗದಲ್ಲಿ ಲೀನರಾದ ಯಾನಗುಂದಿಯ ಮಾತೆ ಮಾಣಿಕೇಶ್ವರಿ.. - ಮಾತೆ ಮಾಣಿಕೇಶ್ವರಿ ಅಂತ್ಯಸಂಸ್ಕಾರ

ಮದ್ಯಾಹ್ನ 1 ಗಂಟೆ ಸುಮಾರಿಗೆ ಗಾಳಿಯಲ್ಲಿ ಮೂರು ಸುತ್ತ ಗುಂಡು ಹಾರಿಸಿ ಮಾತೆಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಸುಮಾರು ಎರಡು ಗಂಟೆಗಳ ಕಾಲ ಮಾತೆ ಶಿವಧ್ಯಾನ ಮಾಡುತ್ತಿದ್ದ ಆಶ್ರಮದ ಶಿಲಾ ಮಂಟಪದ ನಾಗ ಸಿಂಹಾಸನದಲ್ಲಿ ಪಾರ್ಥಿವ ಶರೀರಕ್ಕೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಲಾಯಿತು.

yanagundi manikeshwari matha funeral,ಶಿವಲಿಂಗದಲ್ಲಿ ಲೀನರಾದ ಯಾನಗುಂದಿಯ ಮಾತೆ ಮಾಣಿಕೇಶ್ವರಿ
ಶಿವಲಿಂಗದಲ್ಲಿ ಲೀನರಾದ ಯಾನಗುಂದಿಯ ಮಾತೆ ಮಾಣಿಕೇಶ್ವರಿ

By

Published : Mar 9, 2020, 5:27 PM IST

Updated : Mar 9, 2020, 5:35 PM IST

ಕಲಬುರಗಿ :ಮಹಾ ತಪಸ್ವಿ, ನಡೆದಾಡುವ ದೇವರು, ಭಕ್ತರ ಪಾಲಿನ ಭಾಗ್ಯದಾತೆ ಕಲಬುರಗಿ ಜಿಲ್ಲೆ ಯಾನಗುಂದಿಯ ಮಾತೆ ಮಾಣಿಕೇಶ್ವರಿ ಅಮ್ಮ ಸರ್ಕಾರಿ ಗೌರವ ಹಾಗೂ ವಿಭೂತಿಯೊಂದಿಗೆ ಶಿವಲಿಂಗದಲ್ಲಿ ಲೀನವಾಗಿ ಕೈಲಾಸ ಸೇರಿದ್ದಾರೆ.

ಮದ್ಯಾಹ್ನ 1 ಗಂಟೆ ಸುಮಾರಿಗೆ ಗಾಳಿಯಲ್ಲಿ ಮೂರು ಸುತ್ತ ಗುಂಡು ಹಾರಿಸಿ ಮಾತೆಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಸುಮಾರು ಎರಡು ಗಂಟೆಗಳ ಕಾಲ ಮಾತೆ ಶಿವಧ್ಯಾನ ಮಾಡುತ್ತಿದ್ದ ಆಶ್ರಮದ ಶಿಲಾ ಮಂಟಪದ ನಾಗ ಸಿಂಹಾಸನದಲ್ಲಿ ಪಾರ್ಥಿವ ಶರೀರಕ್ಕೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಲಾಯಿತು.

ಶಿವಲಿಂಗದಲ್ಲಿ ಲೀನರಾದ ಯಾನಗುಂದಿಯ ಮಾತೆ ಮಾಣಿಕೇಶ್ವರಿ

ಅಮ್ಮನವರ ಆಸೆಯಂತೆ ಸಿಂಹಾಸನದ ಕೆಳಭಾಗದ 12 ಅಡಿಯ ಗುಹೆಯಲ್ಲಿ ಮಾತೆ ಸ್ಥಾಪಿಸಿದ್ದ 5 ಅಡಿ ಎತ್ತರದ ಶಿವಲಿಂಗದಲ್ಲಿ ಪಾರ್ಥಿವ ಶರೀರ ಇರಿಸಿ, ಐದು ಸಾವಿರ ವಿಭೂತಿ, ಅಗತ್ಯ ಸಾಮಗ್ರಿಗಳೊಂದಿಗೆ ಹಿಂದೂ ಧರ್ಮದ ಪ್ರಕಾರ ಶಾಸ್ತ್ರೋಕ್ತವಾಗಿ ಅಂತಿಮ ವಿಧಿ-ವಿಧಾನದ ಮೂಲಕ ಮಾತೆಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Last Updated : Mar 9, 2020, 5:35 PM IST

ABOUT THE AUTHOR

...view details