ಕರ್ನಾಟಕ

karnataka

ETV Bharat / state

ಭಕ್ತಿಯ ಪರಾಕಾಷ್ಠೆ: ಭೀಮಾ ನದಿ ಪ್ರವಾಹದಲ್ಲಿ ಮುಳುಗಿದ ದೇವಸ್ಥಾನಕ್ಕೆ ಹೋಗಿ ಅರ್ಚಕನಿಂದ ಪೂಜೆ! - The temple drowned in Bhima river

ಭೀಮಾ ನದಿಯಲ್ಲಿ ಈಗಾಗಲೇ 5.85 ಲಕ್ಷಕ್ಕೂ ಅಧಿಕ ಕ್ಯುಸೆಕ್​ ನೀರು ಹರಿಯುತ್ತಿದ್ದು, ಫಿರೋಜಾಬಾದ್ ಗ್ರಾಮ ಭಾಗಶಃ ಜಲಾವೃತಗೊಂಡಿದೆ. ಆದ್ರೆ ಅರ್ಚಕನೋರ್ವ ಜೀವಭಯ ಬಿಟ್ಟು ನದಿಯಲ್ಲಿ ಈಜಿಕೊಂಡು ಹೋಗಿ ಮಹಾಲಕ್ಷ್ಮಿ ಹಾಗೂ ಅಂಬಿಗರ ಚೌಡಯ್ಯನ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ್ದಾರೆ.

worship in the temple which drowned in Bhima river
ಭೀಮಾ ನದಿ ಪ್ರವಾಹದಲ್ಲಿ ಮುಳುಗಿದ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ ಅರ್ಚಕ!

By

Published : Oct 16, 2020, 1:26 PM IST

ಕಲಬುರಗಿ:ಭೀಮಾ ನದಿ ಪ್ರವಾಹದಲ್ಲಿ ಮುಳುಗಿದ ದೇವಸ್ಥಾನಕ್ಕೆ ಅರ್ಚಕನೋರ್ವ ಈಜಿಕೊಂಡು ಹೋಗಿ ಪೂಜೆ ಸಲ್ಲಿಸಿರುವ ಘಟನೆ ಫಿರೋಜಾಬಾದ್​ ಗ್ರಾಮದಲ್ಲಿ ನಡೆದಿದೆ.

ನೀರಿನಲ್ಲಿ ಮುಳುಗಿದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅರ್ಚಕ

ಭೀಮಾ ನದಿಯಲ್ಲಿ ಈಗಾಗಲೇ 5.85 ಲಕ್ಷಕ್ಕೂ ಅಧಿಕ ಕ್ಯುಸೆಕ್​ ನೀರು ಹರಿಯುತ್ತಿದ್ದು, ಫಿರೋಜಾಬಾದ್ ಗ್ರಾಮ ಭಾಗಶಃ ಜಲಾವೃತಗೊಂಡಿದೆ. ಗ್ರಾಮದ ಮಹಾಲಕ್ಷ್ಮಿ ಮಂದಿರ ಸೇರಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ.

ಇಂದು ಅಮಾವಾಸೆ ಹಿನ್ನೆಲೆ ಪ್ರವಾಹದ ನೀರಿನಲ್ಲಿ ಹನುಮಂತ ಪೂಜಾರಿ ಎಂಬುವರು ನದಿಯಲ್ಲಿ ಈಜುಕೊಂಡು ಹೋಗಿ ಮಹಾಲಕ್ಷ್ಮಿ ಹಾಗೂ ಅಂಬಿಗರ ಚೌಡಯ್ಯನ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ್ದಾರೆ. ಅರ್ಚಕನ ಈ ಕಾರ್ಯಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ABOUT THE AUTHOR

...view details