ಕಲಬುರಗಿ: ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ಗೆ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಕ್ಲಾಸ್ ತೆಗೆದುಕೊಂಡ ಘಟನೆ ತಾಜ್ ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ.
ಕೆಲಸ ಮಾಡುತ್ತಿದ್ದವರನ್ನು ಹೇಗಿದ್ದೀರಾ ಎಂದು ಕೇಳಿದ ಶಾಸಕರಿಗೆ ಮಹಿಳೆಯರಿಂದ ತರಾಟೆ - Kalburgi latest news
ಉದ್ಯೋಗ ಖಾತ್ರಿ ಕೆಲಸ ವೀಕ್ಷಣೆಗೆ ತೆರಳಿದ್ದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್, ಹೇಗಿದ್ದೀರೆಂದು ಕಾರ್ಮಿಕರ ಕುಷಲೋಪರಿ ವಿಚಾರಿಸಿದ್ದಾರೆ. ಆ ವೇಳೆ ಮಹಿಳೆಯರು ಶಾಸಕರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
![ಕೆಲಸ ಮಾಡುತ್ತಿದ್ದವರನ್ನು ಹೇಗಿದ್ದೀರಾ ಎಂದು ಕೇಳಿದ ಶಾಸಕರಿಗೆ ಮಹಿಳೆಯರಿಂದ ತರಾಟೆ Worker task class against Dattatreya patil Revur](https://etvbharatimages.akamaized.net/etvbharat/prod-images/768-512-7272704-737-7272704-1589957516237.jpg)
ಮಹಿಳೆಯರಿಂದ ತರಾಟೆ
ಉದ್ಯೋಗ ಖಾತ್ರಿ ಕೆಲಸ ವೀಕ್ಷಣೆಗೆ ತೆರಳಿದ್ದ ಇವರು, ಹೇಗಿದ್ದೀರೆಂದು ಕಾರ್ಮಿಕರ ಕುಷಲೋಪರಿ ವಿಚಾರಿಸಿದ್ದಾರೆ. ಆ ವೇಳೆ ಮಹಿಳೆಯರು ಶಾಸಕ ರೇವೂರ್ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಶಾಸಕರಿಗೆ ಮಹಿಳೆಯರಿಂದ ತರಾಟೆ
ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಬಂದು ಮತ ಕೇಳ್ತಿರಾ. ಲಾಕ್ಡೌನ್ ಸಂದರ್ಭದಲ್ಲಿ ಈ ಕಡೆ ತಿರುಗಿಯೂ ನೋಡಿಲ್ಲ. ಈಗ ಬಂದು ಹೇಗಿದ್ದಿರಾ ಎಂದು ಕೇಳುತ್ತಿರಾ? ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಲಾಗದೆ ಸ್ಥಳದಿಂದ ಶಾಸಕರು ತೆರಳಿದ್ದಾರೆ.
Last Updated : May 20, 2020, 1:58 PM IST